ದೇಶದ ಯುವಕರ ಆರೋಗ್ಯವಂತ ಬಲಿಷ್ಠ ತೋಳುಗಳ ಮೇಲೆ ಹರಿದಾಡುತ್ತಿರುವ ಬುಲ್ಡೋಜರ್! ಕಾರಣವೇನು ಗೊತ್ತ ?

Share the Article

ಇದೀಗ ದೇಶದ ಯುವಕರ ಆರೋಗ್ಯವಂತ ಬಲಿಷ್ಠ ತೋಳುಗಳ ಮೇಲೆ ಬುಲ್ಡೋಜರ್ ಗಳದೇ ಸರಬರ ಓಡಾಟ. ಬಣ್ಣ ಬಣ್ಣದ ಚಿತ್ತಾರದ ಬುಲ್ಡೋಜರ್ ಗಳು ಯುವ ಜನತೆಯ ತೋಳ ಬಳಸಿ ನಿಂತಿವೆ: ಟ್ಯಾಟೂ ಗಳ ರೂಪದಲ್ಲಿ.
ಟ್ಯಾಟೋ ಎನ್ನುವುದು ಈಗ ಒಂದು ಫ್ಯಾಶನ್ ಆಗಿಬಿಟ್ಟಿದ್ದೆ.‌ ವೈವಿಧ್ಯಮಯ ಟ್ಯಾಟೋಗಳನ್ನು ದೇಹದ ಎಲ್ಲಾ ಅಂಗಗಳಲ್ಲೂ ಹಾಕಿಸಿಕೊಳ್ಳುತ್ತಾರೆ. ಒಂದೊಂದು ಟ್ಯಾಟೋಗೂ ಒಂದೊಂದು ಅರ್ಥವಿದೆ. ವಿಶೇಷವೆಂದರೆ ಉತ್ತರ ಪ್ರದೇಶದ ಚುನಾವಣೆಯಾಗಿ ಬಿಜೆಬಿ ಜಯದ ಭೇರಿ ಭಾರಿಸಿದ ನಂತದ ವಾರಣಾಸಿಯ ಜನ ಬುಲ್ಡೋಜರ್’ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ ಏಕೆ ಗೊತ್ತೆ ?

ವೈವಿಧ್ಯಮಯ ವರ್ಣರಂಜಿದ ಟ್ಯಾಟೋ ಬದಲು ಬುಲ್ಡೋಜರ್’ ಟ್ಯಾಟೂಗಳನ್ನು ಹಾಕಿಸಿಕೊಂಡು ಬುಲ್ಡೋಜರ್ ಬಾಬಾ ಎಂದು ಬರೆಸಿಕೊಳ್ಳುತ್ತಿದ್ದಾರೆ . ಯಾರು ಈ ಬುಲ್ಡೋಜರ್ ಬಾಬಾ ? ಇಲ್ಲಿದೆ ಕುತೂಹಲಕಾರಿ ಮಾಹಿತಿ.

ಉತ್ತರ ಪ್ರದೇಶ ಚುನಾವಣೆಯಲ್ಲಿ  ಬಿಜೆಪಿ ಗೆದ್ದ ನಂತರ, ವಾರಣಾಸಿಯ ಬೆಂಬಲಿಗರು ತಮ್ಮ ತೋಳುಗಳ ಮೇಲೆ ‘ಬುಲ್ಡೋಜರ್’ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಬುಲ್ಡೋಜರ್ ಬಾಬಾ ಎಂದು ಬರೆಸಿಕೊಳ್ಳುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಅವರನ್ನು ‘ಬುಲ್ಡೋಜರ್ ಬಾಬಾ’ ಎಂದು ಕರೆಯಲಾಯಿತು.ಏಕೆಂದರೆ ಅವರ ಸರ್ಕಾರವು ರಾಜ್ಯದಲ್ಲಿ ಕ್ರಿಮಿನಲ್‌ಗಳು ಮತ್ತು ಮಾಫಿಯಾಗಳ ಅಕ್ರಮ ಆಸ್ತಿಯನ್ನು ಕೆಡವಲು ಬುಲ್‌ಡೋಜರ್‌ಗಳನ್ನು ನಿಯೋಜಿಸುತ್ತಿದೆ. ಹಾಗಾಗಿ ಯೋಗಿ ಅವರನ್ನು ಬುಲ್ಡೋಜರ್ ಬಾಬಾ ಎಂದು ಕರೆಯಲಾಗುತ್ತಿದೆ.

ಪ್ರತಿಷ್ಠಿತ ಆಂಗ್ಲ ಪತ್ರಿಕೆಯೊಂದು ಅವರನ್ನು ‘ಬಾಬಾ ಬುಲ್ಡೋಜರ್’ ಎಂದು ಕರೆದಿದೆ. ಹಾಗಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾಷಣದಲ್ಲಿ, ‘ನಾವು ಅವರನ್ನು ‘ಇದುವರೆಗೆ ‘ಬಾಬಾ ಮುಖ್ಯಮಂತ್ರಿ’ ಎಂದು ಕರೆಯುತ್ತಿದ್ದೆವು. ಆದರೆ ಇಂದು ಪ್ರತಿಷ್ಠಿತ ಆಂಗ್ಲ ಪತ್ರಿಕೆಯೊಂದು ಅವರನ್ನು ‘ಬಾಬಾ ಬುಲ್ಡೋಜರ್’ ಎಂದು ಕರೆದಿದೆ, ನಾನು ಈ ಹೆಸರನ್ನು ಇಟ್ಟಿಲ್ಲ, ಈ ಹೆಸರನ್ನು ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆ ಇಟ್ಟಿದೆ’ ಎಂದರು.

ಹೀಗಾಗಿ ಯೋಗಿ ಆದಿತ್ಯನಾಥ ಈಗ ಬುಲ್ಡೋಜರ್ ಬಾಬಾ ಆಗಿ ಪ್ರಸಿದ್ದಿ ಪಡೆದಿದ್ದಾರೆ. ಯೋಗಿ ಅಭಿಮಾನಿಗಳು ಬುಲ್ಡೋಜರ್ ಬಾಬಾ ಎಂದು ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ.‌ ವಾರಣಾಸಿಯ ಬಹುಪಾಲು ಜನತೆ ಬುಲ್ಡೋಜರ್ ಟ್ಯಾಟೋ ಹಾಕಿಸಿಕೊಳ್ಳುತ್ತಿದೆ.

Leave A Reply