ತನ್ನ ನೆಚ್ಚಿನ ನಟನ ಸಿನಿಮಾ ಊಹಿಸಿದಷ್ಟು ಚೆನ್ನಾಗಿಲ್ಲವೆಂದು ನೇಣಿಗೆ ಕೊರಳೊಡ್ಡಿದ ಅಭಿಮಾನಿ!!

ಇಂದಿನ ಕಾಲದಲ್ಲಿ ಸಿನಿಮಾ ಹುಚ್ಚು ಇರದ ಜನರೇ ಇಲ್ಲ. ಪ್ರತಿಯೊಬ್ಬರಿಗೂ ನಟ-ನಟಿಯರ ಪರಿಚಯ ಇದ್ದೇ ಇರುತ್ತದೆ. ಹೀಗಿರುವಾಗ ಅವರಿಗೆ ಇಷ್ಟದ ನಟರು ಇರುತ್ತಾರೆ. ಸಿನಿಮಾ ಅಂದ್ರೇನೆ ಪ್ರಾಣ ಬಿಡೋ ಅಭಿಮಾನಿ ಬಳಗದ ನಡುವೆ ತಮ್ಮ ನೆಚ್ಚಿನ ನಟರ ಸಿನಿಮಾ ಬಿಡುಗಡೆ ಆದ್ರೆ ಕೇಳೋದೇ ಬೇಡ. ಅದೊಂದು ಉತ್ಸಾಹವೇ ಬೇರೆ.

ಹೌದು. ಇದೆ ರೀತಿ ತನ್ನ ನೆಚ್ಚಿನ ನಟನ ಫಿಲ್ಮ್ ಗೆ ಕಾದು ಕೂತಿದ್ದ ವ್ಯಕ್ತಿ, ಆತನ ಸಿನಿಮಾ ನೋಡಿ ಬಳಿಕ ಮಾಡಿದ್ದು ಏನು ಗೊತ್ತೇ!? ಆತ್ಮಹತ್ಯೆ!!!.ಈತನ ಈ ಸಾವಿಗೆ ಕಾರಣವೇ ತನ್ನ ನೆಚ್ಚಿನ ನಟನ ಸಿನಿಮಾ ಚೆನ್ನಾಗಿಲ್ಲ ಎಂಬುದು.ಈ ಘಟನೆ ಆಂಧ್ರಪ್ರದೇಶದ ಕರ್ನೂಲ್ ನಗರದ ತಿಲಕ್ ನಗರದಲ್ಲಿ ನಡೆದಿದೆ.

ನಗರದ ನಿವಾಸಿ ರವಿ ಮೃತ ದುರ್ದೈವಿ. ಈತ ವೆಲ್ಡಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.

ಇತ್ತೀಚೆಗಷ್ಟೇ ತನ್ನ ನೆಚ್ಚಿನ ನಟನ ಸಿನಿಮಾ ರಿಲೀಸ್ ಆಗಿತ್ತು. ಹೀಗಾಗಿ ಶುಕ್ರವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿದ್ದಾರೆ. ನಂತರ ಮನೆಗೆ ಬಂದ ರವಿ ತಾನು ನಿರೀಕ್ಷಿಸಿದಷ್ಟು ಸಿನಿಮಾ ಚೆನ್ನಾಗಿಲ್ಲ, ತನ್ನ ನೆಚ್ಚಿನ ನಾಯಕನಿಗೆ ಸಿನಿಮಾದ ಮೇಲೆ ಕೆಟ್ಟ ಅಭಿಪ್ರಾಯಗಳು ಮೂಡಿಬರುತ್ತಿವೆ ಎಂದು ದುಃಖಿತನಾಗಿ ಅದೇ ರಾತ್ರಿ ಅವನು ನೇಣಿಗೆ ಶರಣಾಗಿದ್ದಾನೆ.

ಶನಿವಾರ ಬೆಳಗ್ಗೆ ಅವನ ತಾಯಿ ಎಷ್ಟೇ ಕರೆದರೂ ಬಾಗಿಲು ತೆರೆದಿಲ್ಲ. ನಂತರ ವೆಲ್ಡಿಂಗ್ ಯಂತ್ರದಿಂದ ಬಾಗಿಲು ತೆಗೆದಾಗ ಸೀಲಿಂಗ್‌ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಈ ವೇಳೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು.ಮೃತನ ತಾಯಿಯ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply