ಅಪ್ಪನ ಜೊತೆ ಜಗಳ ಮಾಡಿ ನೇಣಿಗೆ ಶರಣಾದ 4ನೇ ತರಗತಿಯ ಬಾಲಕ !

Share the Article

ಚಿಕ್ಕಮಗಳೂರು: 9 ವರ್ಷದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಚಿಕ್ಕಮಗಳೂರಿನ ಆಲ್ಲೂರು ಗ್ರಾಮದಲ್ಲಿ ನಡೆದಿದೆ.

ಅಪ್ಪನ ಜೊತೆ ಜಗಳವಾಡಿದ್ದಕ್ಕೆ ಬಾಲಕ ಈ ನಿರ್ಧಾರ ಮಾಡಿದ್ದಾನೆ. ಚೇತನ್(9) ಮೃತ ದುರ್ದೈವಿ ಬಾಲಕನಾಗಿದ್ದು 4 ನೇ ತರಗತಿ ಓದುತ್ತಿದ್ದಾನೆ.

ಗಣೇಶ್ ಹಾಗೂ ಶೋಭಾ ಅವರ ಪುತ್ರ ಮೃತ ಚೇತನ್. ಇವರು ಮೂಲತಃ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಶೇಷಗಿರಿ ಗ್ರಾಮದವರು.

ಕಳೆದ ನಾಲ್ಕೈದು ವರ್ಷಗಳ ಹಿಂದೆ ಜಿಲ್ಲೆಗೆ ಆಗಮಿಸಿದ್ದ ದಂಪತಿ ಇಬ್ಬರು ಗಂಡು ಮಕ್ಕಳೊಂದಿಗೆ ಆಲ್ಲೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿವಾಗಿದ್ದಾರೆ. ಕಾಫಿತೋಟಗಳಿಗೆ ಕೂಲಿ ಕೆಲಸ ಮಾಡಿಕೊಂಡಿದ್ದರು.

ಮೃತ ಬಾಲಕ ತುಸು ಸಿಟ್ಟಿನ ಸ್ವಭಾವದವನಾಗಿದ್ದು, ಆಗಾಗ ಕೆಲ ವಿಚಾರಗಳಿಗೆ ಅಪ್ಪ-ಅಮ್ಮನ ಜೊತೆ ಜಗಳವಾಡುತ್ತಿದ್ದನಂತೆ.

ರಾಣೆಬೆನ್ನೂರಿನಲ್ಲಿ ಜಾತ್ರೆ ಇದ್ದ ಕಾರಣ ಕಳೆದ ನಾಲ್ಕು ದಿನಗಳ ಹಿಂದೆ ಕುಟುಂಬ ಅಲ್ಲಿಗೆ ಹೋಗಿತ್ತು.

Leave A Reply

Your email address will not be published.