ಡಿ.ಕೆ.ಶಿವಕುಮಾರ್ ಗೆ ಬಿಜೆಪಿಯಿಂದ ಧನ್ಯವಾದ ಟ್ವೀಟ್!

ಬೆಂಗಳೂರು : ಡಿ ಕೆ ಶಿವಕುಮಾರ್ ಅವರಿಗೆ ಬಿಜೆಪಿ ಧನ್ಯವಾದ ತಿಳಿಸುವ ಟ್ವೀಟೊಂದನ್ನು ಮಾಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಧನ್ಯವಾದ. ಕಾಂಗ್ರೆಸ್ ಮುಕ್ತ ಸಂಕಲ್ಪಕ್ಕೆ ನೀವು ಧ್ವನಿ. ಸೋಲಿನ ಮೇಲೆ ಸೋಲು ಕಾಣುತ್ತಿರುವ ಕಾಂಗ್ರೆಸ್ ಪಕ್ಷ ಈಗ ನಿರುದ್ಯೋಗಿಗಳ ಸಂಗಮವಾಗಿದೆ. ಅಧ್ಯಕ್ಷರಾಗಿ 2 ವರ್ಷ ಕಳೆದರೂ ಪದಾಧಿಕಾರಿಗಳ ಪಟ್ಟಿ ಭರ್ತಿ ಮಾಡಲು ಸಾಧ್ಯವಾಗದವರು ನೀವು.‌ ನಿಮ್ಮಂಥವರು ದೇಶದ ನಿರುದ್ಯೋಗದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ಟ್ವಿಟ್ಟರಿನಲ್ಲಿ ಬರೆದಿದೆ‌.

ಮೊದಲು ನಿಮ್ಮ‌ ಕಾರ್ಯಕರ್ತರಿಗೆ ಪಕ್ಷದ ಜವಾಬ್ದಾರಿ ಕಲಿಸಿ. ಡಿಕೆಶಿ ಕಾಂಗ್ರೆಸ್ ಕಂಡ ವಿಫಲಾಧ್ಯಕ್ಷ ಎಂದು ಬರೆದಿದೆ

Leave A Reply

Your email address will not be published.