ಭಜನೆಗೂ ಕಾಲಿಟ್ಟ ‘ಪುಷ್ಪಾ’ ಸಿನಿಮಾದ ಶ್ರೀವಲ್ಲಿ ಹಾಡಿನ ಸ್ಟೆಪ್ : ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್

ಕಳೆದ ವರ್ಷ ತೆರೆಕಂಡ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ‘ಪುಷ್ಪ’ ಮಾಡಿದ ಕ್ರೇಜ್ ಇಲ್ಲಿಯವರೆಗೂ ಕಮ್ಮಿ ಆಗಿಲ್ಲ.

ವಿಶ್ವದಾದ್ಯಂತ 300 ಕೋಟಿ
ರೂಪಾಯಿಗಿಂತಲೂ ಅಧಿಕ ಹಣ ಕಲೆಕ್ಷನ್ ಮಾಡಿ ಸೈ ಎನಿಸಿಕೊಂಡಿದ ಈ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರಿಗೆ ‘ಪುಷ್ಪ’ ಸಿನಿಮಾದಿಂದ ದೇಶಾದ್ಯಂತ ಜನಪ್ರಿಯತೆ ಹೆಚ್ಚಿದಂತೂ ಸುಳ್ಳಲ್ಲ.

ಅದರಲ್ಲೂ ಶ್ರೀವಲ್ಲಿ ಹಾಡಂತೂ ಸದ್ಯ ಟಾಪ್ ಟ್ರೆಂಡಿಂಗ್ ಹಾಡುಗಳ ಲಿಸ್ಟ್ ನಲ್ಲಿದೆ.

ಈ ಹಾಡಿನಲ್ಲಿರುವ ಸ್ಟೆಪ್ಪು ಯುವ ಜನತೆಯನ್ನು ಮಾತ್ರವಲ್ಲದೇ ಮಕ್ಕಳನ್ನು ಕೂಡಾ ತುಂಬಾ ಆಕರ್ಷಿಸಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಹಾಡಿನದ್ದೆ ಕ್ರೇಜ್ ಹೆಚ್ಚಾಗಿದೆ.

ಆದರೆ ಇದೀಗ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಶ್ರೀವಲ್ಲಿ ಹಾಡಿನ ಸ್ಟೆಪ್ಪು ಒಂದು ಕಾಣಲು ಸಿಕ್ಕಿದೆ.

ಭಜನಾ ತಂಡದ ಸದಸ್ಯರು ಭಜನೆ ಹಾಡುತ್ತಲೇ ಈ ಹಾಡಿಗೆ ಸಿನೆಮಾದಲ್ಲಿ ಅಲ್ಲು ಅರ್ಜುನ್ ಮಾಡಿರುವ ನೃತ್ಯದಂತೆ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ಹಾಡು ಫುಲ್ ವೈರಲ್ ಆಗಿದ್ದು, ಎಲ್ಲಿ ನಡೆದಿರೋದು ಅನ್ನೋದು ಇನ್ನೂ ತಿಳಿದು ಬಂದಿಲ್ಲ.

Leave A Reply