ಶಾಲೆಯಲ್ಲಿ ಬೌನ್ಸರ್ ಗಳ ಗೂಂಡಾಗಿರಿ | ಶಾಲಾ ಶುಲ್ಕದ ಮಾಹಿತಿ ಕೇಳಲು ಬಂದ ಪೋಷಕರಿಗೆ ಹಲ್ಲೆ

ಸಾಮಾನ್ಯವಾಗಿ ಪಬ್, ಬಾರ್‌ಗಳಲ್ಲಿ ಬೌನ್ಸರ್ ಗಳನ್ನು ಕೆಲಸಕ್ಕೆ ನೇಮಕ ಮಾಡುವುದು ಹಾಗೆನೇ ಸೆಲೆಬ್ರಿಟಿಗಳು ಕೂಡಾ ಅಭಿಮಾನಿಗಳಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವುದಕ್ಕೂ ಬೌನ್ಸರ್ ಬಳಸುವುದೂ ಸಹ ಸಾಮಾನ್ಯ. ಆದರೆ ಈಗ ಶಾಲೆಗೂ ಕೂಡಾ ಈ ಬೌನ್ಸರ್ ಸಂಸ್ಕೃತಿ ಬಂದುಬಿಟ್ಟಿದೆ.

ಈಗ ಅಚ್ಚರಿಯ ವಿಷಯ ಏನೆಂದರೆ ಶಾಲೆಯೊಂದು ಬೌನ್ಸರ್ ನೇಮಿಸಿಕೊಂಡಿದ್ದು, ಆ ಬೌನ್ಸರ್ ಪೋಷಕರಿಗೆ ಥಳಿಸಿದ್ದು, ವಿವಾದಕ್ಕೆ ಕಾರಣವಾಗಿದೆ.

ಈ ಘಟನೆ ನಡೆದಿರುವುದು ಪುಣೆ ನಗರದಲ್ಲಿ.

ಶಾಲಾ ಶುಲ್ಕದ ಬಗ್ಗೆ ಶಾಲೆಯ ಅಧಿಕಾರಿಗಳನ್ನು ಭೇಟಿ ಮಾಡಲು ಬಂದ ಬಿಬ್ಬೆವಾಡಿಯ ನ್ ಮೆಮೋರಿಯಲ್ ಹೈಸ್ಕೂಲ್‌ಗೆ ತೆರಳಿದ್ದ ವಿದ್ಯಾರ್ಥಿಯ ಪೋಷಕರೊಬ್ಬರ ಮೇಲೆ ಮಹಿಳಾ ಬೌನ್ಸರ್‌ನಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಮಂಗೇಶ್ ಗಾಯಕ್ವಾಡ್ ಅವರು ಬಿಬ್ಬೆವಾಡಿ ಪೊಲೀಸ್
ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ಪಾಲಕರು ಮತ್ತು ಶಾಲೆಯ ನಡುವೆ ಶುಲ್ಕದ ವಿಷಯದಲ್ಲಿ ಜಗಳ ನಡೆದಿದ್ದು, ನಂತರ ಹಲ್ಲೆ ಘಟನೆ ನಡೆದಿದೆ ಎಂದು ಹಿರಿಯ ಇನ್ಸ್‌ಪೆಕ್ಟರ್ ಹೇಳಿದ್ದಾರೆ.

Leave A Reply

Your email address will not be published.