ನೆಲ್ಯಾಡಿ : ರಬ್ಬರ್ ಟ್ಯಾಪಿಂಗ್ ಗೆಂದು ಹೋದ ವೇಳೆ ವಿಷಕಾರಿ ಹಾವು ಕಡಿತ| ಗ್ರಾ‌.ಪಂ.ಸದಸ್ಯೆ ಸಾವು

Share the Article

ನೆಲ್ಯಾಡಿ : ರಬ್ಬರ್ ಟ್ಯಾಪಿಂಗ್ ಗೆ ಹೋಗಿದ್ದ ವೇಳೆ ವಿಷಕಾರಿ ಹಾವು ಕಡಿದು ಗ್ರಾ.ಪಂ.ಮಾಜಿ ಸದಸ್ಯೆ ಮೃತಪಟ್ಟ ಘಟನೆ ಕೊಣಾಲು ಗ್ರಾಮದಲ್ಲಿ ನಡೆದಿದೆ.

ಗೋಳಿತೊಟ್ಟು ಗ್ರಾ.ಪಂ.ಮಾಜಿ ಸದಸ್ಯೆ ಕೊಣಾಲು ಗ್ರಾಮದ ಆರ್ಲ ನಿವಾಸಿ ರೋಸಮ್ಮ ಪಿ ಡಿ ಯಾನೆ ವಲ್ಸಮ್ಮ ( 52) ಮೃತಪಟ್ಟ ಮಹಿಳೆಯಾಗಿದ್ದಾರೆ. ರೋಸಮ್ಮ ಅವರು ಮಾ.11 ರಂದು ರಾತ್ರಿ ತಮ್ಮದೇ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಗೆ ಹೋಗಿದ್ದ ಸಂದರ್ಭದಲ್ಲಿ ವಿಷಕಾರಿ ಹಾವು ಕಡಿದಿದೆ. ಇದು ಗಮನಕ್ಕೆ ಬರುತ್ತಿದ್ದಂತೆ ರೋಸಮ್ಮ ಅಲ್ಲಿಂದ ಪಕ್ಕದ್ಮನೆಗೆ ಬಂದಿದ್ದು ಅಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ನೆಲ್ಯಾಡಿಯ ಆಸ್ಪತ್ರೆಯೊಂದಕ್ಕೆ ಕರೆತರಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟುದ್ದಾರೆಂದು ತಿಳಿದು ಬಂದಿದೆ.

Leave A Reply