ಅಕ್ವೇರಿಯಂ ಅಂಗಡಿಯ ಸಿಬ್ಬಂದಿ, ಸಾಲ್ಮರ ನಿವಾಸಿ ಸುಲೈಮಾನ್ ನಾಪತ್ತೆ

Share the Article

ಪುತ್ತೂರು: ಇಲ್ಲಿನ ಬಸ್ ನಿಲ್ದಾಣದ ಅಕ್ವೇರಿಯಂ ಅಂಗಡಿಯಲ್ಲಿ ಕೆಲಸಕ್ಕಿದ್ದ ಸಾಲ್ಮರ ನಿವಾಸಿ ಸುಲೈಮಾನ್ ಯಾನೆ ಆಶೀಪ್ ನಾಪತ್ತೆಯಾಗಿರುವುದಾಗಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ತಾರಿಗುಡ್ಡೆ ಇಬ್ರಾಹಿಂ ಅವರ ಪುತ್ರ ಸುಲೈಮಾನ್ ಯಾನೆ ಆಶೀವ್ (27ವ.) ನಾಪತ್ತೆಯಾದವರು.

ಐಟಿಐ ವಿದ್ಯಾಭ್ಯಾಸ ಪಡೆದು ಬಸ್ ನಿಲ್ದಾಣದ ಬಳಿಯಲ್ಲಿರುವ ಅಕ್ವೇರಿಯಂ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಸುಲೈಮಾನ್ ಮಾ.7ರಂದು ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದಾರೆ.

ಬಳಿಕ ಮನೆ ವಾಪಸ್ ಬಂದಿಲ್ಲ. ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದಾಗಲೂ ಆತನ ಪತ್ತೆಯಾಗಿಲ್ಲ ಎಂದು ತಾಯಿ ಹಾಜಿರಾರವರು ನಗರ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೋಧಕಾರ್ಯ ನಡೆಸುತ್ತಿದ್ದಾರೆ.

Leave A Reply