NEET PG 2021 : ಕಟ್ ಆಫ್ ಪರ್ಸಂಟೈಲ್ ಕಡಿತ

Share the Article

ಹೊಸದಿಲ್ಲಿ : ದೇಶದಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿಯ 8000 ಸೀಟುಗಳು ಖಾಲಿ ಉಳಿದಿರುವ ಹಿನ್ನೆಲೆಯಲ್ಲಿ ನೀಟ್- ಪಿಜಿ 2021 ರ ಕಟ್ ಆಫ್ ನ್ನು 15 ಪರ್ಸಂಟೈಲ್ ಕಡಿಮೆ ಮಾಡಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯವು ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ನಿರ್ದೇಶನ ನೀಡಿದೆ.

ಎಲ್ಲ ವರ್ಗದ ವಿದ್ಯಾರ್ಥಿಗಳ ಕಟ್ ಆಫ್ ನ್ನು 15 ಪರ್ಸಂಟೈಲ್ ಕಡಿಮೆ ಮಾಡಲು ತಿಳಿಸಲಾಗಿದೆ. ಇದರಿಂದಾಗಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಕಟ್ ಆಫ್ 35 ನೇ ಪರ್ಸಂಟೈಲ್, ಸಾಮಾನ್ಯ ವರ್ಗದ ಅಂಗವಿಕಲ ವಿದ್ಯಾರ್ಥಿಗಳ ಕಟ್ ಆಫ್ 30 ನೇ ಪರ್ಸಂಟೈಲ್ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ವಿದ್ಯಾರ್ಥಿಗಳ ಕಟ್ ಆಫ್ 25 ನೇ ಪರ್ಸಂಟೈಲ್ ಆಗಲಿದೆ.

Leave A Reply

Your email address will not be published.