ಈ ಶೈಕ್ಷಣಿಕ ವರ್ಷದಿಂದಲೇ ಅರ್ಲಿ ಚೈಲ್ಡ್ ಎಜುಕೇಶನ್ ( ECE) ಪ್ರಾರಂಭ – ಬಿ ಸಿ ನಾಗೇಶ್

ಈ ಶೈಕ್ಷಣಿಕ ವರ್ಷದಿಂದಲೇ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಅರ್ಲಿ ಚೈಲ್ಡ್ ಎಜುಕೇಜನ್ (ECE) ಅನ್ನು ಪ್ರಾರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಎನ್ ಇಪಿ ಜಾರಿ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಮದನ ಗೋಪಾಲ ನೇತೃತ್ವದಲ್ಲಿ 26 ಉಪಸಮಿತಿಗಳನ್ನು ರಚಿಸಲಾಗಿದೆ. ಸಮಿತಿಯು ಈಗಾಗಲೇ ತಜ್ಞರ ಅಭಿಪ್ರಾಯ ಪಡೆದು ಪಠ್ಯಕ್ರಮ ಸಿದ್ಧ ಮಾಡುತ್ತಿದೆ. ಸಿದ್ಧವಾದ ಕರಡು ಪಠ್ಯಕ್ರಮವನ್ನು ಕೇಂದ್ರಕ್ಕೆ ಕಳಿಸಿ, ಅನುಮೋದನೆ ಪಡೆದು ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.

ಇನ್ನು ಕೋವಿಡ್ ಸಂದರ್ಭದಲ್ಲಿ ಕಲಿಕೆಯಲ್ಲಿ ಉಂಟಾದ ಅಂತರ
ಸರಿದೂಗಿಸಲು ಬೇಸಿಗೆ ರಜೆ ನಂತರ 15 ದಿನ ಮುಂಚೆಯೇ ಶಾಲೆ ಪ್ರಾರಂಭಿಸಲಾಗುವುದು ಎಂಬ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

Leave A Reply