ಭವಿಷ್ಯ ನಿಧಿ ಠೇವಣಿದಾರರಿಗೆ ಸಿಹಿ ಸುದ್ದಿ !! | ಬಡ್ಡಿದರ ಶೇಕಡಾ 8.1 ಕ್ಕೆ ಇಳಿಕೆ ಮಾಡಿ ಆದೇಶ ಹೊರಡಿಸಿ EPFO

ನಿವೃತ್ತಿ ನಿಧಿ ಸಂಸ್ಥೆ EPFO ಇಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಭವಿಷ್ಯ ನಿಧಿ ಠೇವಣಿ(PF)ಗಳ ಮೇಲಿನ ಬಡ್ಡಿದರವನ್ನು ಕಡಿಮೆ ಮಟ್ಟಕ್ಕೆ ಶೇಕಡಾ 8.5ರಿಂದ ಶೇಕಡಾ 8.1 ಕ್ಕೆ ಇಳಿಸಿದೆ. ಇದು ಕಳೆದ ನಾಲ್ಕು ದಶಕಗಳಲ್ಲಿಯೇ ಅತಿ ಕಡಿಮೆಯಾಗಿದ್ದು, 5 ಕೋಟಿ ಠೇವಣಿದಾರರು ಇದರ ಪ್ರಯೋಜನ ಪಡೆಯಲಿದ್ದಾರೆ.

1977-78ರಲ್ಲಿ EPF ಬಡ್ಡಿ ದರ ಶೇಕಡಾ 8ರಷ್ಟಿತ್ತು. “ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು 2021-22 ಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಮೇಲೆ ಶೇಕಡಾ 8.1 ರಷ್ಟು ಬಡ್ಡಿದರವನ್ನು ನೀಡಲು ಶನಿವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.


Ad Widget

Ad Widget

Ad Widget

Ad Widget

Ad Widget

Ad Widget

2020-21 ರ EPF ಠೇವಣಿಗಳ ಮೇಲೆ ಶೇಕಡಾ 8.5ರಷ್ಟು ಬಡ್ಡಿ ದರವನ್ನು ಮಾರ್ಚ್ 2021 ರಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (CBT) ನಿರ್ಧರಿಸಿತು. ನಂತರ ಅದನ್ನು ಕಳೆದ ವರ್ಷ ಅಕ್ಟೋಬರ್ ನಲ್ಲಿ ಹಣಕಾಸು ಸಚಿವಾಲಯವು ಅನುಮೋದಿಸಿತು. ಹೀಗಾಗಿ 2020-21ರಲ್ಲಿ ಠೇವಣಿದಾರರಿಗೆ ಶೇಕಡಾ 8.5ರ ಬಡ್ಡಿದರ ನೀಡಲು ಭವಿಷ್ಯ ನಿಧಿ ಸಂಸ್ಥೆ ಆದೇಶ ಹೊರಡಿಸಿತ್ತು.

ಇದೀಗ ಇಪಿಎಫ್ ನ ಕೇಂದ್ರೀಯ ಟ್ರಸ್ಟಿಗಳ ಮಂಡಳಿ 2021-22ನೇ ಆರ್ಥಿಕ ಸಾಲಿನಲ್ಲಿ ಇಪಿಎಫ್ ಠೇವಣಿಗಳ ಮೇಲೆ ನೀಡಲಾಗುವ ಬಡ್ಡಿದರವನ್ನು ವಿವರಿಸಿ ಹಣಕಾಸು ಸಚಿವಾಲಯಕ್ಕೆ ಒಪ್ಪಿಗೆಗೆ ಕಳುಹಿಸುತ್ತದೆ. ಹಣಕಾಸು ಸಚಿವಾಲಯ ಮೂಲಕ ಸರ್ಕಾರ ಅನುಮತಿ ನೀಡಿದ ನಂತರವೇ ಇಪಿಎಫ್ಒ ಠೇವಣಿದಾರರಿಗೆ ಬಡ್ಡಿದರವನ್ನು ನೀಡುತ್ತದೆ.

ಭವಿಷ್ಯ ನಿಧಿ ಠೇವಣಿ ಮೇಲೆ 7 ವರ್ಷಗಳಲ್ಲಿ ಕಡಿಮೆ ಅಂದರೆ ಶೇಕಡಾ 8.5 ನಿಗದಿಪಡಿಸಿ ಮಾರ್ಚ್ 2020ರಲ್ಲಿ ನಿವೃತ್ತಿ ನಿಧಿ ಸಂಸ್ಥೆ(EPFO) ಆದೇಶ ಹೊರಡಿಸಿತ್ತು. 2018-19ರಲ್ಲಿ ಭವಿಷ್ಯ ನಿಧಿ ಠೇವಣಿ ಮೇಲೆ ಬಡ್ಡಿದರ ಶೇಕಡಾ 8.65ರಷ್ಟಿದ್ದದ್ದು, 2019-20ರಲ್ಲಿ ಶೇಕಡಾ 8.5ರಷ್ಟಾಗಿತ್ತು. 2012-13ರ ನಂತರ 2019-20ರಲ್ಲಿ ಶೇಕಡಾ 8.5ಕ್ಕೆ ಬಡ್ಡಿದರ ತಗ್ಗಿಸಿದ್ದು 7 ವರ್ಷಗಳಲ್ಲಿ ಅತಿ ಕಡಿಮೆಯಾಗಿತ್ತು.

error: Content is protected !!
Scroll to Top
%d bloggers like this: