ತೋಟಗಾರಿಕಾ ಇಲಾಖೆಯಲ್ಲಿ ತರಬೇತಿ ನೀಡಲು ಆಸಕ್ತರಿಂದ ಅರ್ಜಿ ಆಹ್ವಾನ !!| ಅರ್ಜಿ ಸಲ್ಲಿಸಲು ಏಪ್ರಿಲ್ 16 ಕೊನೆಯ ದಿನ

ತೋಟಗಾರಿಕೆ ಇಲಾಖೆಯಿಂದ 2022-23 ನೇ ಸಾಲಿನ ಐದು ಮಹಿಳಾ ಹಾಗೂ ಹತ್ತು ಜನ ಪುರುಷ ಅಭ್ಯರ್ಥಿಗಳು ಸೇರಿ ಒಟ್ಟು 15 ಅಭ್ಯರ್ಥಿಗಳಿಗೆ ಮೇ 2,2022 ರಿಂದ ಫೆಬ್ರುವರಿ 28,2023 ರವರೆಗೆ ಒಟ್ಟು 10 ತಿಂಗಳುಗಳ ಅವಧಿಗೆ ಗದಗದಲ್ಲಿರುವ ತೋಟಗಾರಿಕಾ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಧಾರವಾಡ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರ ಕಛೇರಿಯಲ್ಲಿ ಸಲ್ಲಿಸಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ 30 ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 15 ರೂ. ಅರ್ಜಿ ಶುಲ್ಕವಿದೆ. ಈ ಶುಲ್ಕವನ್ನು ಇಂಡಿಯನ್ ಪೋಸ್ಟಲ್ ಆರ್ಡರ್ ಅಥವಾ ಬ್ಯಾಂಕ್ ಡಿಡಿಯನ್ನು ತೋಟಗಾರಿಕೆ ಉಪ ನಿರ್ದೇಶಕರ ಹೆಸರಿನಲ್ಲಿ ಪಡೆದು ಅರ್ಜಿ ಜೊತೆಗೆ ಲಗತ್ತಿಸಬೇಕು.

ಅರ್ಜಿ ನಮೂನೆಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯಲ್ಲಿ ಅಥವಾ ಇಲಾಖಾ ವೆಬ್‍ಸೈಟ್ https://horticulturedir.karnataka.gov.in ನಲ್ಲಿ ಮಾರ್ಚ್ 15ರಿಂದ ಏಪ್ರಿಲ್ 16 ರವರೆಗೆ ಲಭ್ಯವಿದ್ದು, ಡೌನ್‍ಲೋಡ್ ಮಾಡಿಕೊಳ್ಳಬಹುದು.

ಭರ್ತಿ ಮಾಡಿದ ಅರ್ಜಿಗಳನ್ನು ಏಪ್ರಿಲ್ 16 ರ ಸಂಜೆ 5 ಗಂಟೆಯೊಳಗೆ ದಾಖಲಾತಿಗಳೊಂದಿಗೆ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಕಚೇರಿಯ ದೂರವಾಣಿ ಸಂಖ್ಯೆ: (0836-2957801).ಗೆ ಸಂಪರ್ಕಿಸಬಹುದು ಎಂದು ತೋಟಗಾರಿಕೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.