ಮಂಗಳೂರಿನ ಈ ಸೆಲೂನ್ ನಲ್ಲಿದೆ ಕೇವಲ ಒಂದು ರುಪಾಯಿಯ ಹೇರ್ ಕಟ್ಟಿಂಗ್ ಆಫರ್ !! | ಮಾರ್ಚ್ 11 ರಂದು ಮಾತ್ರ ಈ ಆಫರ್ ನಲ್ಲಿ ಕ್ಷೌರ ಮಾಡಿಸಿಕೊಳ್ಳಲು ಅವಕಾಶ

ಮಂಗಳೂರಿನ ಜನತೆಗೊಂದು ಬಂಪರ್ ಆಫರ್ ಘೋಷಣೆಯಾಗಿದೆ. ಮಂಗಳೂರು ಮಹಾನಗರ ಪ್ರದೇಶಗಳ ಸೆಲೂನ್‌ಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಮಂಗಳೂರಿನ ಕದ್ರಿ ಕಂಬಳದಲ್ಲಿರುವ “ಸ್ಪಿನ್” ಹೆಸರಿನ ಸೆಲೂನ್ ಕೇವಲ 1 ರೂಪಾಯಿಗೆ ಇಡೀ ದಿನ ಕ್ಷೌರದ ಆಫರ್ ನೀಡಿದೆ.

ಹೌದು. ಮಾರ್ಚ್ 11ರಂದು ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೂ ಕ್ಷೌರ ಮಾಡಿಸಿಕೊಳ್ಳಲು ಅವಕಾಶ ಇದೆ. ಪುರುಷರು ಕ್ಷೌರ ಮಾತ್ರ ಮಾಡಿಸಿಕೊಳ್ಳಬಹುದು. ಅಲ್ಲದೆ ಮಕ್ಕಳಿಗೂ(ಹೆಣ್ಣು, ಗಂಡು) ಕ್ಷೌರಕ್ಕೆ ಅವಕಾಶ ನೀಡಲಾಗಿದೆ.ಮಹಿಳೆಯರೂ ಉದ್ದನೆಯ ಕೂದಲನ್ನು ಕಡಿತಗೊಳಿಸಲು ಆಸ್ಪದ ನೀಡಲಾಗಿದೆ. ಇವೆಲ್ಲದಕ್ಕೂ ಒಬ್ಬರಿಗೆ ಬರೀ 1 ರೂಪಾಯಿ ಮಾತ್ರ.

ಈ ಬಗ್ಗೆ ಬುಧವಾರದಿಂದಲೇ ಬುಕ್ಕಿಂಗ್ ಆರಂಭಿಸಲಾಗಿದೆ. ಈ ಆಫರ್ ಕುರಿತು ಜಾಲತಾಣಗಳಲ್ಲಿ ಮಾಹಿತಿ ಹರಿಯಬಿಡಲಾಗಿದೆ. ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ 1 ರೂಪಾಯಿ ಕ್ಷೌರಕ್ಕೆ ಆಗಮಿಸಬೇಕು ಎಂಬುದು ಸೆಲೂನ್ ಪಾಲುದಾರ ಬೆಂಗಳೂರಿನ ನವೀನ್ ಅವರ ಬಯಕೆಯಾಗಿದೆ.

ರಾಜ್ಯದ 36 ಕಡೆಗಳಲ್ಲಿ ಸ್ಪಿನ್ ಹೆಸರಿನ ಸೆಲೂನ್ ಇದೆ. ಇದೇ ಮೊದಲ ಬಾರಿಗೆ ಮಂಗಳೂರಿನಿಂದ ಈ ಆಫರನ್ನು ಪ್ರಾರಂಭಿಸಲಾಗಿದೆ. ನಿರೀಕ್ಷೆಗೂ ಮೀರಿ ಜನರು ಬಂದರೆ, ಟೋಕನ್ ನೀಡಿ ಮುಂದಿನ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ. ಮಂಗಳೂರು ಬಳಿಕ ರಾಜ್ಯದ ವಿವಿಧ ಕಡೆಗಳಲ್ಲಿ ಸ್ಪಿನ್ ಸೆಲೂನ್‌ಗಳಲ್ಲಿ 1 ರೂಪಾಯಿಗೆ ಕ್ಷೌರ ಆಫರ್ ಘೋಷಿಸಲಾಗುವುದು ಎಂದು ಮಾಲೀಕರು ತಿಳಿಸಿದ್ದಾರೆ.

Leave A Reply

Your email address will not be published.