ಚಿಕನ್ ಪೀಸ್ ಗಾಗಿ ಇಬ್ಬರ ನಡುವೆ ಶುರುವಾದ ಜಗಳ ಒಬ್ಬನ ಪ್ರಾಣ ಹೋಗುವ ಮೂಲಕ ಅಂತ್ಯ!

0 22

ಆಸ್ತಿಗಾಗಿ ಹೊಡೆದಾಡಿಕೊಂಡು ಪ್ರಾಣ ಬಿಟ್ಟಂತಹ ಘಟನೆಯನ್ನು ನಾವು ಕೇಳಿದ್ದೇವೆ. ಆದ್ರೆ ಇಲ್ಲೊಂದು ಕಡೆ ಕೇವಲ ಚಿಕನ್ ಪೀಸ್ ಗಾಗಿ ಇಬ್ಬರ ನಡುವೆ ಜಗಳ ಆರಂಭವಾಗಿ ಒಬ್ಬ ಸಾವಿಗೀಡಾದ ಘಟನೆ ನಡೆದಿದೆ.

ಮೃತರನ್ನು ಧಾರವಾಡದ ಲಕ್ಷ್ಮಿ ಸಿಂಗನಕೇರಿ ನಿವಾಸಿ ಸಾದಿಕ್ ಬಿಟ್ನಾಳ (30) ಎಂದು ಗುರುತಿಸಲಾಗಿದೆ.

ಈ ಘಟನೆ ಧಾರವಾಡದ ಪೆಂಡಾರಗಲ್ಲಿ ಬಡಾವಣೆಯಲ್ಲಿ ಕಳೆದ ರಾತ್ರಿ ನಡೆದಿದೆ.ಮದುವೆ ಮನೆಯಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದ್ದು,ಚಿಕನ್ ಪೀಸ್ ಗಾಗಿ ಕಾದಾಡಿದ ಸಾದಿಕ್ ಮತ್ತು ರಿಜ್ವಾನ್ ವಿಕೋಪಕ್ಕೆ ಹೋಗಿದ್ದಾರೆ. ಬಳಿಕ ಸಾದಿಕ್ ನನ್ನು ರಿಜ್ವಾನ್ ತಳ್ಳಿದ್ದಾನೆ. ಈ ವೇಳೆ ಕೆಳಗಡೆ ಬಿದ್ದ ಸಾದಿಕ್‌ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಮೃತ ಪಟ್ಟಿದ್ದಾನೆ.

ಈ ಘಟನೆಗೆ ಸಂಬಂಧಿಸಿದಂತೆ ದೂರು ನೀಡಲು ಸಾದಿಕ್ ನ ಮನೆಯವರು ಮೊದಲು ಒಪ್ಪಿರಲಿಲ್ಲ ಎನ್ನಲಾಗಿದ್ದು,ಕೊನೆಗೆ ಸಾದಿಕ್ ನ ಮರಣದ ನಂತರ ಧಾರವಾಡ ನಗರ ಪೋಲಿಸ್ ಠಾಣೆಯಲ್ಲಿ ದೂರು ನೀಡಲಾಗಿದೆ.ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಆರೋಪಿ ರಿಜ್ವಾನ್ ನನ್ನು ವಶಕ್ಕೆ ಪಡೆದಿದ್ದಾರೆ.

Leave A Reply