ತಾಯಿ ಬಳಿ ಬೆಚ್ಚಗೆ ಮಲಗಿರುವ ಪುಟ್ಟ ಕಂದಮ್ಮನಿಂದ ಪುಷ್ಪ ಚಿತ್ರದ ಡೈಲಾಗ್ ಟಚ್ !! | ನೋಡಿದವರ ಮುಖದಲ್ಲಿ ಮುಗುಳ್ನಗೆ ಮೂಡಿಸುವ ಈ ವೀಡಿಯೋ ವೈರಲ್

ಅಂತರಾಷ್ಟ್ರೀಯ ಮಟ್ಟದಲ್ಲಿ ‘ಪುಷ್ಪ’ ಚಿತ್ರ ಸೃಷ್ಟಿಸಿದ್ದ ಹವಾ ಎಂತಹದ್ದು ಎಂದು ಎಲ್ಲರಿಗೂ ಗೊತ್ತಿದೆ. ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದ್ದಲ್ಲದೆ, ಡೈಲಾಗ್‌ಗಳ ಮೂಲಕವೂ ಸಿನಿ ರಸಿಕರ ಮನ ಸೆಳೆದಿತ್ತು. ಸಾಕಷ್ಟು ಮಂದಿ ಈ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರೆ, ಇನ್ನೊಂದಷ್ಟು ಮಂದಿ ಡೈಲಾಗ್‌ಗೆ ಲಿಪ್‌ ಸಿಂಕ್ ಮಾಡಿ ಖುಷಿಪಟ್ಟಿದ್ದಾರೆ. ಈ ಎಲ್ಲಾ ವೀಡಿಯೋಗಳ ನಡುವೆ ಇಲ್ಲಿ ನವಜಾತ ಕಂದನ ಕ್ಯೂಟ್ ವೀಡಿಯೋವೊಂದು ಸಖತ್ ವೈರಲ್ ಆಗುತ್ತಿದೆ.

ತಾಯಿ ಪಕ್ಕ ಬೆಚ್ಚಗೆ ಮಲಗಿರುವ ಈ ಕಂದನ ಹಾವಭಾವಕ್ಕೆ ಇಲ್ಲಿ ಪುಷ್ಪ ಚಿತ್ರದ ಡೈಲಾಗ್‌ನ ಟಚ್ ಕೊಡಲಾಗಿದೆ. ಹೀಗಾಗಿ, ಈ ವೀಡಿಯೋ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಲ್ಲದೇ, ಮುಗುಳ್ನಗೆಯನ್ನೂ ಮೂಡಿಸಿದೆ. ಕೆಲವರು ಎರಡೆರಡು ಸಲ ಈ ದೃಶ್ಯವನ್ನು ನೋಡಿ ಖುಷಿಪಟ್ಟರೂ ಅಚ್ಚರಿಯಿಲ್ಲ.

ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ 3 ಸೆಕೆಂಡ್‌ಗಳ ಈ ವೀಡಿಯೋ ಕ್ಲಿಪ್‌ ಅನ್ನು ಹಂಚಿಕೊಂಡಿದ್ದಾರೆ. ಅಲ್ಲು ಅರ್ಜುನ್ ಅವರ `ಯಾರಿಗೂ ತಲೆಬಾಗುವುದಿಲ್ಲ’ ಎಂಬ ಹಿಂದಿ ಡೈಲಾಗ್‌ ಹಿನ್ನೆಲೆಯಲ್ಲಿ ಸೇರಿಸಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.

https://twitter.com/AwanishSharan/status/1500843504515579904?s=20&t=xM3Z26EEdUhsc27i5RMAKw

ಸಹಜವಾಗಿಯೇ ಈ ವೀಡಿಯೋ ಈಗ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಎಲ್ಲರೂ ಈ ದೃಶ್ಯ ಕಂಡು ಖುಷಿ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಈ ವೀಡಿಯೋ ಸಾಕಷ್ಟು ವೀಕ್ಷಣೆ ಗಳಿಸಿದ್ದು, ಎಲ್ಲರಲ್ಲೂ ಮಂದಹಾಸ ಮೂಡಿಸಿದ್ದಂತೂ ಸತ್ಯ.

Leave A Reply

Your email address will not be published.