ಗಂಡು ಮಗು ಹುಟ್ಟಿಲ್ಲವೆಂದು 7 ದಿನದ ಹೆಣ್ಣುಮಗುವನ್ನು ನಿರ್ದಯಿಯಾಗಿ ಗುಂಡಿಕ್ಕಿ ಕೊಂದ ತಂದೆ !!

Share the Article

ಗಂಡು ಮಗು ಪಡೆಯದೆ ಹತಾಶನಾಗಿದ್ದ ತಂದೆಯೊಬ್ಬ ತನ್ನ ಏಳು ದಿನದ ಹೆಣ್ಣು ಮಗುವನ್ನು ನಿರ್ದಯಿಯಾಗಿ ಗುಂಡಿಕ್ಕಿ ಕೊಂದಿರುವ ಘಟನೆ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.

ಮಗುವನ್ನು ಹತ್ಯೆ ಮಾಡಿರುವ ತಂದೆಯನ್ನು ಶಹಜೈಬ್ ಖಾನ್ ಎಂದು ಗುರುತಿಸಲಾಗಿದೆ.

ಶಹಜೈಬ್ ಖಾನ್ ಎಂಬಾತ ಎರಡು ವರ್ಷಗಳ ಹಿಂದೆ ಮಶಾಲ್ ಫಾತಿಮಾಳನ್ನು ಮದುವೆಯಾಗಿದ್ದು, ಒಂದು ವಾರದ ಹಿಂದೆ ಆತನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಜನನದ ಸುದ್ದಿಯನ್ನು ಕೇಳಿದ ಖಾನ್ ತನ್ನ ಹೆಂಡತಿ ಮತ್ತು ಮಗಳನ್ನು ಶಪಿಸಲು ಪ್ರಾರಂಭಿಸಿ ಈ ಕೃತ್ಯ ಎಸಗಿದ್ದಾನೆ.

ಇನ್ನು ಹೆಣ್ಣು ಮಗು ಹುಟ್ಟಿದ ಆಕ್ರೋಶದಲ್ಲಿ ಮನೆ ಬಿಟ್ಟು ಹೋಗಿದ್ದ ಶಹಜೈಬ್ ಖಾನ್ ಭಾನುವಾರ ಮನೆಗೆ ಮರಳಿ ಪಿಸ್ತೂಲ್ ತೆಗೆದುಕೊಂಡು ಗುಂಡು ಹಾರಿಸಿ ಶಿಶುವನ್ನು ಹತ್ಯೆಗೈದಿದ್ದಾನೆ.

Leave A Reply