ಇನ್ನು ಮುಂದೆ ಇಂಟರ್ನೆಟ್ ಇಲ್ಲದೆಯೂ ಮಾಡಬಹುದು ಪೇಮೆಂಟ್ |ಸ್ಮಾರ್ಟ್ ಫೋನ್ ಅಗತ್ಯವೇ ಇಲ್ಲದೆ ಕೇವಲ ಫೀಚರ್ ಮೊಬೈಲ್ ಮೂಲಕ ಪಾವತಿ|ಏನಿದು ಫೀಚರ್ ಫೋನ್? ಇಲ್ಲಿದೆ ನೋಡಿ ಡೀಟೇಲ್ಸ್

ಹಣ ಪಾವತಿಗೆ ಅದೆಷ್ಟೋ ಜನ ಸರ್ವರ್ ಸಮಸ್ಯೆಯಿಂದಲೋ ಅಥವಾ ಇಂಟರ್ನೆಟ್ ನಿಂದ ಪೇಮೆಂಟ್ ಮಾಡುವ ಕಾರಣ ಸ್ಮಾರ್ಟ್ ಫೋನ್ ಇಲ್ಲದೆ ಪರದಾಡಿದ್ದು ಉಂಟು. ಇದೀಗ ಇದಕ್ಕೆಲ್ಲ ಬ್ರೇಕ್ ಎಂಬಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಡಿಜಿಟಲ್ ಪೇಮೆಂಟ್ ವಿಧಾನವೊಂದನ್ನು ಪರಿಚಯಿಸಿದೆ.

ಸಾಮಾನ್ಯ ಫೀಚರ್ ಫೋನ್​ಗಳಲ್ಲಿಯೂ ಹಣ ಪಾವತಿ ಮಾಡುವ ಹೊಸ ರೀತಿಯ ಯುಪಿಐ ಅನ್ನು ರಿಸರ್ವ್ ಬ್ಯಾಂಕ್ ಜಾರಿಗೆ ತಂದಿದೆ. ಭಾರತದಲ್ಲಿ ಇನ್ನೂ ಕೋಟ್ಯಾಂತರ ಫೀಚರ್ ಫೋನ್ ಬಳಕೆದಾರರು ಇದ್ದು ಅವರೂ ಸಹ ಶೀಘ್ರದಲ್ಲೇ ಡಿಜಿಟಲ್ ಪಾವತಿಗಳನ್ನು ಮಾಡಲು ಸಾಧ್ಯವಾಗಲಿದೆ.ಫೀಚರ್​ ಫೋನ್ ​ಗಳಲ್ಲಿ ಹಣ ವರ್ಗಾವಣೆ ಅಥವಾ ಪಾವತಿ ಮಾಡುವ ಹೊಸ ಯುಪಿಐ ವಿಧಾನಕ್ಕೆ UPI123Pay ಎಂದು ಹೆಸರಿಸಲಾಗಿದೆ.ಇಂಟರ್​ನೆಟ್​ ಅಗತ್ಯವೇ ಇಲ್ಲದೇ ಹಣ ವರ್ಗಾವಣೆ ಅಥವಾ ಪಾವತಿ ಮಾಡಬಹುದಾಗಿದೆ.

ಸಹಾಯವಾಣಿಯನ್ನು ಸಹ ರಿಸರ್ವ್ ಬ್ಯಾಂಕ್ ತೆರೆದಿದ್ದು,ಮಾರ್ಚ್ 08, 2022 ರಂದು ಮಧ್ಯಾಹ್ನ 12 ಗಂಟೆಗೆ RBI ಗವರ್ನರ್ ಡಿಜಿಸಾತಿ ,” ಸೆಂಟ್ರಲ್ ಬ್ಯಾಂಕ್ ತನ್ನ ಅಧಿಕೃತ ಹ್ಯಾಂಡಲ್ ಮೂಲಕ ಟ್ವೀಟ್ ಮೂಲಕ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ.

ಫೀಚರ್​ ಫೋನ್‌ಗಳು ಈಗ ಹೆಚ್ಚಾಗಿ ಬಳಕೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳಲ್ಲ. ಅವುಗಳಲ್ಲಿ ಕರೆಗಳನ್ನು ಮಾಡಬಹುದು ಮತ್ತು ಪಠ್ಯ ಸಂದೇಶವನ್ನು ಕಳುಹಿಸಬಹುದು. ಇಂತಹ ಮೂಲಭೂತ ಕಾರ್ಯಗಳನ್ನು ಮಾತ್ರ ನಿರ್ವಹಿಸಬಲ್ಲ ಸಾಮಾನ್ಯವಾಗಿ ಕೀಪ್ಯಾಡ್ ಹೊಂದಿರುವ ಫೋನ್​ಗಳನ್ನು ಫೀಚರ್ ಫೋನ್​ಗಳು ಎನ್ನುತ್ತಾರೆ.ಫೀಚರ್ ಫೋನ್ ಬಳಕೆದಾರರು ಹೊಸ ಪಾವತಿ ಪದ್ಧತಿಗೆ ಸೀಮಿತ ಪ್ರವೇಶವನ್ನು ಹೊಂದಿರಲಿದ್ದಾರೆ. ಫೀಚರ್​ ಫೋನ್‌ಗಳುರಾಷ್ಟ್ರೀಯ ಏಕೀಕೃತ USSD ಪ್ಲಾಟ್‌ಫಾರ್ಮ್ ಅನ್ನು ಹೊಂದಿದ್ದರೂ, *99# ನ ಶಾರ್ಟ್‌ಕೋಡ್ ಅನ್ನು ಬಳಸಿಕೊಂಡು ಮೂಲ ಪಾವತಿ ಸೇವೆ ಬಳಸುವ ಆಯ್ಕೆಯನ್ನು ಹೊಂದಿರಲಿವೆ.

ಈ ಕುರಿತು ವಿವರಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು, ಪ್ರಸ್ತುತ ದಶಕವು ದೇಶಾದ್ಯಂತ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಪರಿವರ್ತನೆಯ ಬದಲಾವಣೆಗೆ ಸಾಕ್ಷಿಯಾಗಲಿದೆ ಎಂದು ಹೇಳಿದರು. ಡಿಜಿಟಲ್ ವಹಿವಾಟುಗಳನ್ನು ಇನ್ನಷ್ಟು ಬಲವರ್ಧನೆಗೊಳಿಸಲು ಕಳೆದ ಮೂರು ವರ್ಷಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಲವಾರು ಕ್ರಮಗಳನ್ನು ಘೋಷಿಸಿದೆ ಎಂದು ಅವರು ಹೇಳಿದರು.

Leave A Reply

Your email address will not be published.