‘ಮುಟ್ಟಿನ ಸಂಭ್ರಮ’ ದಲ್ಲಿ ಮಿಂದೆದ್ದ ತೃತೀಯ ಲಿಂಗಿ!

ಹೆಣ್ಣು ದೊಡ್ಡವಳಾಗುವುದರ ಸಂಕೇತ ಆಕೆ ಪರಿಪೂರ್ಣ ಹೆಣ್ಣಾಗಿ, ತಾಯ್ತತನಕ್ಕೆ ತನ್ನ ದೇಹವನ್ನು ತಯಾರಿಮಾಡಿಕೊಳ್ಳುವ ಒಂದು ಪ್ರಕೃತಿದತ್ತವಾಗಿ ನಡೆಯುವ ಒಂದು ಪ್ರಕ್ರಿಯೆ.

ಕೆಲವು ಪ್ರದೇಶಗಳಲ್ಲಿ ಈ ಹೆಣ್ಣು ದೊಡ್ಡವಳಾಗುವ ಸಂಭ್ರಮವನ್ನು ಮದುವೆಯ ಸಡಗರದಂತೆ ಮಾಡುತ್ತಾರೆ.

ಆದರೆ ತೃತೀಯ ಲಿಂಗಿಗಳು ಹೆಣ್ಣು ಎಂದು ಕರೆಸಿಕೊಂಡರೂ ಹೆಣ್ತನದ ಸುಖ ಅನುಭವಿಸುವ ಭಾಗ್ಯವಿದೆಯೇ ? ಇಲ್ಲಿದೆ ಓದಿ ಇಂಥದ್ದೇ ಒಂದು ಮನಮಿಡಿಯುವ ಘಟನೆ. ಈ ಘಟನೆ ನಡೆದಿರುವುದು ತಮಿಳುನಾಡಿನ ಕಡಲೂರು ಜಿಲ್ಲೆಯ ವಿರುದಾಚಲಂನಲ್ಲಿ ನಡೆದಿದೆ.

ಮದುವಣಗಿತ್ತಿಯಂತೆ‌ ಶೃಂಗಾರಮಾಡಿಕೊಂಡು ಕುಳಿತಿರುವ ಈಕೆಯ ಹೆಸರು ನಿಶಾ. ಮೂಲ ಹೆಸರು ನಿಶಾಂತ್. ಈತನಿಗೆ ತನ್ನ ದೇಹದಲ್ಲಾಗುವ ಬದಲಾವಣೆ ಬಗ್ಗೆ ಅರಿವಾಗಿ ಅಪ್ಪ ಅಮ್ಮನಲ್ಲಿ ಹೇಳಿದಾಗ, ಅಪ್ಪ ಅಮ್ಮ ಸಮಾಜಕ್ಕೆ ಹೆದರಿ ಒಂದು ಹಂತದಲ್ಲಿ ಏನೋ ಹೇಳಿದ್ದಾರೆ. ಇದರಿಂದ ಬೇಸರಗೊಂಡ ನಿಶಾಂತ್ ಮನೆ ಬಿಟ್ಟು ಹೋಗಿ ತೃತೀಯ ಲಿಂಗಿ ಸಮುದಾಯದವರ ಜೊತೆ ವಾಸವಾಗತೊಡಗಿದ್ದಾರೆ. ಹಾಗೆ ಹೋದ ನಿಶಾಂತ್ ಗೆ ಈಗ 21 ವರ್ಷ. ಮನೆ ಬಿಟ್ಟು ಹೋದ ಮಗನಿಗಾಗಿ ಹಂಬಲಿಸಿದ ತಾಯಿಗೆ ತಾನು ಮಾಡಿದ್ದು ತಪ್ಪು ಅಂತ ಗೊತ್ತಾಗಿದೆ. ನಿಶಾಂತ್ ನ ಕರೆದುಕೊಂಡು ಬಂದು ಆತನ ಇಚ್ಛೆಯಂತೆಯೇ ಮಹಿಳೆಯಾಗಿಯೇ ಉಳಿಯಲು‌ ಅವಕಾಶ ಕಲ್ಪಿಸಿ ನಿಶಾ ಅಂತ ಹೆಸರಿಟ್ಟರು. ಇಷ್ಟು ಮಾಡಿದ ಅಮ್ಮನಿಗೆ ಮುಟ್ಟಿನ ಸಂಭ್ರಮ ಮಾಡಬೇಕೆಂದು ಯೋಚನೆ ಮಾಡುತ್ತಾರೆ. ಮೊದಲ ಬಾರಿಗೆ ಮುಟ್ಟಾದಾಗ ಯಾವ ರೀತಿಯಲ್ಲಿ ಸಂಭ್ರಮಾಚರಣೆ ಮಾಡಲಾಗುತ್ತದೆಯೋ ಅದೇ ರೀತಿಯ ವಿಧಿವಿಧಾನಗಳನ್ನು ಮಾಡಿ ಸಂಭ್ರಮದಿಂದ ಈ ಸಂಭ್ರಮಾಚರಣೆ ಮಾಡಿದ್ದಾರೆ.

Leave A Reply

Your email address will not be published.