ಮಂಗಳೂರು: ಮೀನುಗಾರರ ಬಲೆಗೆ ಬಿದ್ದ ಭಾರಿ ಗಾತ್ರದ ಮಡಲ್ ಮೀನು !! | ಮೀನನ್ನು ಮೇಲಕ್ಕೆತ್ತುವ ವೀಡಿಯೋ ಫುಲ್ ವೈರಲ್

ಮಂಗಳೂರು: ಬೃಹತ್ ಗಾತ್ರದ ಮಡಲ್ ಮೀನೊಂದು ಉಳ್ಳಾಲದ ಮೊಗವೀರಪಟ್ಟಣದಲ್ಲಿ ಮೀನುಗಾರರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

ಅಶ್ವಿನ್ ಪುತ್ರನ್ ಮಾಲೀಕತ್ವದ ಹಂಷ್ ಹೆಸರಿನ ಬೋಟ್ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ವೇಳೆ ಈ ಮಡಲ್ ಮೀನು ಬಿದ್ದಿದ್ದು,ಬಲೆಗೆ ಬಿದ್ದ ಮೀನನ್ನು ಮೇಲಕೆತ್ತುವ ವಿಡಿಯೋವನ್ನು ಮೀನುಗಾರರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿದ್ದು ಹೆಚ್ಚಿನ ವೀಕ್ಷಣೆ ಪಡೆದಿದೆ.

ತೆಂಗಿನ ಗರಿಯನ್ನು ಹೋಲುವುದರಿಂದ ಈ ಮೀನನ್ನು ತುಳು ಭಾಷೆಯಲ್ಲಿ ‘ಮಡಲ್’ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.

Leave A Reply

Your email address will not be published.