ಬೀದಿ ನಾಯಿ ಮೇಲೆ ಅತ್ಯಾಚಾರ ಎಸಗಿದ ವಿಕೃತ ಕಾಮಿ|

ಮುಂಬೈ : ನಿಯತ್ತಿಗೆ ಹೆಸರಾದ ಪ್ರಾಣಿ ಎಂದರೆ ನಾಯಿ. ಒಂದೆರಡು ತುತ್ತು ಅನ್ನ ಹಾಕಿದರೆ ಸಾಕು ಅನ್ನ ಹಾಕಿದ ವ್ಯಕ್ತಿಯ ಋಣ ಮರೆಯೋದಿಲ್ಲ. ಅಂಥಾ ಒಂದು ಮುಗ್ಧ ಪ್ರಾಣಿಯ ಮೇಲೆ ಬೀದಿ ಕಾಮಣ್ಣರ ಕಣ್ಣು ಬಿದ್ದಿದೆ. ಬೀದಿ ನಾಯಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಮಹಾರಾಷ್ಟ್ರದ ಅಂಬರ್ ನಾಥ್ ನಲ್ಲಿ 45 ವರ್ಷದ ರಿಜ್ವಾನ್ ಶೇಖ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ತನ್ನ ಮನೆಯ ಎದುರಿನ ರಸ್ತೆಯಲ್ಲಿ ಸುತ್ತಾಡುತ್ತಿದ್ದ ಬೀದಿ ನಾಯಿಯನ್ನು ಬಲವಂತವಾಗಿ ಮನೆಗೆ ಕರೆದುಕೊಂಡು ಹೋಗುವುದನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ನೋಡಿದ್ದರು. ಇದರಿಂದ ಅನುಮಾನಗೊಂಡ ಅವರು ಆ ವ್ಯಕ್ತಿ ಮೇಲೆ ಒಂದು ಕಣ್ಣಿಟ್ಟಿದ್ದರು. ಒಂದು ಆ ಬೀದಿ ನಾಯಿ ತೀವ್ರ ನೋವಿನಿಂದ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದುದನ್ನು ನೋಡಿದ ಅವರು ನಾಯಿಯನ್ನು ಪಶು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಗ ನಾಯಿಯ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಅಂಬರನಾಥದ ಸಿದ್ಧಾರ್ಥನಗರದಲ್ಲಿ ಆರೋಪಿ ರಿಜ್ವಾನ್ ಶೇಖ್ ವಾಸಿಸುತ್ತಿದ್ದು.. ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಹೆಣ್ಣು ನಾಯಿಯ ಮೇಲೆ ಅತ್ಯಾಚಾದವೆಸಗಿದ ಆರೋಪದ ಮೇಲೆ ಪೊಲೀಸರು ಮಾರ್ಚ್ 3 ರಂದು ರಿಜ್ವಾನ್ ಶೇಖ್ ನನ್ನು ಪೊಲೀಸರು ಬಂಧಿಸಿದ್ದಾರೆ.

Leave A Reply

Your email address will not be published.