ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘KGF ಚಾಪ್ಟರ್​ 2’ ಟೀಸರ್​ ರಿಲೀಸ್ ಡೇಟ್ ಅನೌನ್ಸ್!

ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಕೆಜಿಎಫ್​: ಚಾಪ್ಟರ್​ 2’ ಟ್ರೈಲರ್ ರಿಲೀಸ್ ಯಾವಾಗ ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ.

ಯಶ್ ಅಂದ ಕೂಡಲೇ ಎದೆ ಝಲ್ ಎನ್ನುವ ಇವರ ಹೆಸರಲ್ಲೇ ಪವರ್ ಇರುವಾಗ ಇನ್ನು ಇವರ ಫಿಲ್ಮ್ ಅಂದಾಗ ಅಭಿಮಾನಿ ಬಳಗ ರೊಚ್ಚೆದ್ದು ಕುಣಿಯೋದು ಖಂಡಿತ.ಹೌದು.ಇದೀಗ ಬಹು ನಿರೀಕ್ಷಿತ ಕೆಜೆಎಫ್​ ಚಾಪ್ಟರ್​ 2 ಟ್ರೈಲರ್​ ರಿಲೀಸ್​ಗೆ ಚಿತ್ರ ತಂಡ ಡೇಟ್​ ಅನೌನ್ಸ್ ಮಾಡಿದೆ.

ಕೆಜಿಎಫ್​ ಚಾಪ್ಟರ್​ 2 ಟೀಸರ್​ ಯಾವಾಗ ಬರುತ್ತದೆ ಅಂತ ಕಣ್ಣಲ್ಲಿ ಎಣ್ಣೆ ಬಿಟ್ಕೊಂಡು ಕಾಯ್ತಿದ್ದ ಹುಡುಗರಿಗೆ ಚಿತ್ರತಂಡ ಇದೀಗ ಸಿಹಿ ಸುದ್ದಿ ನೀಡಿದ್ದು,ಡೈರೆಕ್ಟರ್ ಪ್ರಶಾಂತ್ ನೀಲ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಇದೇ ಮಾರ್ಚ್​ 27 ರಂದು ಟ್ರೈಲರ್​ ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ.

https://twitter.com/prashanth_neel/status/1499263301523423232?s=20&t=58HS0PIX34vW0-UbytcVhA

ಅಂತೂ ರಾಕಿಂಗ್ ಯಶ್ ಕೆಜಿಎಫ್-2 ರಲ್ಲಿ ಹೇಗೆ ಕಾಣಿಸಲಿದ್ದಾರೆ ಎಂಬ ಉತ್ಸಾಹ ಎಲ್ಲಾ ಅಭಿಮಾನಿಗಳಲ್ಲಿ ಪ್ರಶ್ನೆಯಾಗಿ ಉಳಿದಿದ್ದು, ಇನ್ನೇನು ಉತ್ತರ ಸಿಗುವ ದಿನ ಹತ್ತಿರದಲ್ಲಿದೆ.

Leave A Reply

Your email address will not be published.