50 ಅಡಿ ಕೊಳವೆ ಬಾವಿಗೆ ಬಿದ್ದ ನಾಲ್ಕು ವರ್ಷದ ಕಂದ| ಬದುಕಿ ಬಂದ ಪುಟ್ಟ ಕಂದನ ಕಥೆಯೆ ರೋಚಕ

ಕೊಳವೆ ಬಾವಿಗೆ ಮಕ್ಕಳು ಬೀಳುವ ಘಟನೆ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ. ಅಂಥದ್ದೇ ಒಂದು ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಕೊಳವೆಬಾವಿಯಲ್ಲಿ ಇದ್ದ ನಾಲ್ಕು ವರ್ಷದ ಕಂದಮ್ಮ‌ 26 ಗಂಟೆಗಳ ಬಳಿಕ ಬಾಲಕ ಸೇಫ್ ಆಗಿದ್ದಾನೆ.

ರಾಜಸ್ಥಾನದ ಸಿಕಾರ್ ಜಿಲ್ಲೆಯ ಋತುಶ್ಯಾಮ್ ಜೀ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜರ್ನಿಯಾ ಕಿ ಧನಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ತೋಟದಲ್ಲಿ ಆಟವಾಡುತ್ತಿದ್ದ ಮಗು ಅಲ್ಲೇ ಇದ್ದ ಕೊಳವೆಬಾವಿಗೆ ಬಿದ್ದಿದ್ದಾನೆ. ಅದನ್ನು ನೋಡಿ ಸ್ಥಳೀಯರು ಮನೆಯವರಿಗೆ ಮಾಹಿತಿ ನೀಡಿದ್ದಾರೆ. ತಕ್ಣಣವೇ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ಅಥವಾ ಎನ್ ಡಿ ಆರ್ ಎಫ್ ಟೀಂ ಸತತ 26 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿದೆ.

ಬೋರ್ ವೆಲ್ ಗೆ ಸಮಾನಾಂತರವಾಗಿ ಸುರಂಗವನ್ನು ಅಗೆಯುವುದರೊಂದಿಗೆ ರಕ್ಷಣಾ ತಂಡವು‌ ಅವನನ್ನು ಹೊರತೆಗೆಯಲು ವಿವಿಧ ರೀತಿಯಲ್ಲಿ ಪ್ರಯತ್ನಿಸಿದೆ.

50 ಅಡಿ ಆಳಕ್ಕೆ ಬಿದ್ದ ಬಾಲಕನಿಗೆ ಬಲೆ, ಹಗ್ಗ ಇತ್ಯಾದಿಗಳನ್ನೆಲ್ಲಾ ಬಿಟ್ಟು, ಹಿಡಿದುಕೊಳ್ಳಲು ಹೇಳಲಾಯ್ತು.

ಪೈಪ್ ಮೂಲಕ ಸುಮಾರು 12 ಆಮ್ಲಜನಕ ನೀಡಲಾಯಿತು. ಜೊತೆಗೆ ಆತನಿಗೆ ಹಗ್ಗದ ಸಹಾಯದಿಂದ ನೀರು, ಹಾಲು, ಬಿಸ್ಕೆಟ್ ಗಳನ್ನು ಸಹ ನೀಡಲಾಯಿತು.

26 ಗಂಟೆಗಳ ಬಳಿಕ ಬಾಲಕನನ್ನು ರಕ್ಷಣೆ ಮಾಡಲಾಗಿದೆ. ಸಾವಿನ ದವಡೆಯಿಂದ ಬಾಲಕ ಪಾರಾಗಿ, ಆರೋಗ್ಯವಾಗಿದ್ದಾನೆ.

Leave A Reply

Your email address will not be published.