ತಿರುಮಲ ತಿರುಪತಿ ದೇವಸ್ಥಾನದ ಪ್ರಸಾದದ ಬೆಲೆ ಏರಿಕೆ | ಭಕ್ತರಿಗೆ ಶಾಕ್ ಕೊಟ್ಟ ಟಿಟಿಡಿ
ತಿರುಪತಿ : ತಿರುಪತಿ ದೇವಸ್ಥಾನ ( ಟಿಟಿಡಿ) ತನ್ನ ಪ್ರಸಾದದ ಬೆಲೆಗಳನ್ನು ಏರಿಕೆ ಮಾಡಿದೆ. ಆದರೆ ಲಡ್ಡು ಪ್ರಸಾದದ ಬೆಲೆಯನ್ನು ಏರಿಕೆ ಮಾಡಿಲ್ಲ. ಆದರೆ ಜಿಲೇಬಿ ಪ್ರಸಾದದ ಬೆಲೆಯನ್ನು ಹೆಚ್ಚಿಸಿದೆ.
100 ಇದ್ದ ಜಿಲೇಬಿ ಬೆಲೆ 500 ರೂ. ಆಗಿದೆ. ಸಾಕಷ್ಟು ಪ್ರಮಾಣದಲ್ಲಿ ಪ್ರಸಾದವನ್ನು ತಯಾರಿಸಲು, ತಿರುಮಲ ದೇವಾಲಯದ ಒಳಗಿನ ಪಾಡಿ ಪೋಟುವಿನಿಂದ ದೇವಾಲಯದ ಹೊರಗೆ ಹೊಸದಾಗಿ ನಿರ್ಮಿಸಲಾದ ಬೂಂದಿ ಕಿಚನ್ ಗೆ ಬದಲಾಯಿಸಲಾಗುತ್ತದೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ.
ಮಧ್ಯವರ್ತಿಗಳ ಕಾಳ ದಂಧೆ ತಿರುಪತಿಯಲ್ಲಿ ಹೆಚ್ಚಾಗಿದ್ದು ಒಂದು ಸೆಟ್ ಪ್ರಸಾದವನ್ನು ಅಧಿಕ ಬೆಲೆಗೆ ಮಾರಾಟ ಮಾಡುವ ವಿಚಾರ ಟಿಟಿಡಿ ಗಮನಕ್ಕೆ ಬಂದಿದೆ.
ಇದನ್ನು ತಡೆಯುವ ಸಲುವಾಗಿ ಜೂನ್ 2021 ರಲ್ಲಿ ಟಿಟಿಡಿ ಆಡಳಿತದ ಉನ್ನತಾಧಿಕಾರಿಗಳು ಟ್ರಸ್ಟ್ ಬೋರ್ಡ್ ಗೆ ಪ್ರಸ್ತುತ 100 ಕ್ಕೆ ಮಾರಾಟವಾಗುತ್ತಿರುವ ಜಿಲೇಬಿ ಮತ್ತು ಥೆಂಥೋಲವನ್ನು 200 ಕ್ಕೆ ಮಾರುವಂತೆ ಪ್ರಸ್ತಾಪವಿರಿಸಿದ್ದರು. ಇದೀಗ ಟಿಟಿಡಿ ಈಗ ದರ ಏರಿಕೆ ಮಾಡಿದೆ.