ಇಂಡಿಯನ್ ಬ್ಯಾಂಕ್ ನಿಂದ 202 ಉದ್ಯೋಗಗಳಿಗೆ ಅರ್ಜಿ ಆಹ್ವಾನ | ಎಸ್ ಎಸ್ ಎಲ್ ಸಿ ಪಾಸಾದವರಿಗೆ ಆದ್ಯತೆ| ಅರ್ಜಿ ಸಲ್ಲಿಸಲು ಮಾರ್ಚ್ 9 ಕೊನೆಯ ದಿನಾಂಕ

ಇಂಡಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಈ ಕೆಳಗೆ ನೀಡಿದ ಮಾಹಿತಿಯನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.

ಆಸಕ್ತರು ಇಂಡಿಯನ್ ಬ್ಯಾಂಕ್ ವೆಬ್‌ಸೈಟ್‌ ಗೆ ಭೇಟಿ ‌ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ಹೆಸರು : ಸೆಕ್ಯುರಿಟಿ ಗಾರ್ಡ್
ಹುದ್ದೆಗಳ ಸಂಖ್ಯೆ : 202

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 23-02-2022

ಆನ್ ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ : 09-03-2022

ಅಪ್ಲಿಕೇಶನ್ ಮಾಹಿತಿ ತಿದ್ದುಪಡಿಗೆ ಕೊನೆ ದಿನಾಂಕ : 09-03-2022

ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ : 24-03-2022

ವೇತನ : ಇಂಡಿಯನ್ ಬ್ಯಾಂಕ್ ಸೆಕ್ಯುರಿಟಿ ಗಾರ್ಡ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.14500 ಆರಂಭದಲ್ಲೇ ಮೂಲ ವೇತನ ಸಿಗಲಿದೆ.

ಅರ್ಹತೆ : ಅಭ್ಯರ್ಥಿ ಕಡ್ಡಾಯವಾಗಿ ಮಾಜಿ ಸೈನಿಕನಾಗಿದ್ದು, ಎಸ್ ಎಸ್ ಎಲ್ ಸಿ ಪಾಸ್ ಮಾಡಿರಬೇಕು. ಇಂಡಿಯನ್ ಬ್ಯಾಂಕ್ ನ ವಿವಿಧ ರಾಜ್ಯಗಳ ಶಾಖೆಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಆಯಾ ರಾಜ್ಯದ ಭಾಷೆ ಮಾತನಾಡಲು, ಓದಲು, ಬರೆಯಲು ಬರಬೇಕು.

ಗರಿಷ್ಠ ವಯೋಮಿತಿ 26 ಮೀರಿರಬಾರದು.

ಆಯ್ಕೆ ಪ್ರಕ್ರಿಯೆ : ಆನ್ಲೈನ್ ಅಬ್ಜೆಕ್ಟಿವ್ ಟೈಪ್ ಟೆಸ್ಟ್, ಸ್ಥಳೀಯ ಭಾಷೆ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುವುದು.

ಅರ್ಜಿ ಸಲ್ಲಿಕೆ ಹೇಗೆ ? ಇಂಡಿಯನ್ ಬ್ಯಾಂಕ್ ನ ವೆಬ್‌ಸೈಟ್‌ ಗೆ ಭೇಟಿ ನೀಡಿ, career ಲಿಂಕನ್ನು ಕ್ಲಿಕ್ ಮಾಡಿ, ನಂತರ Recruitment of Security Guards ಎಂದಿರುವಲ್ಲಿ ಕ್ಲಿಕ್ ಮಾಡಿ, ಆನ್ಲೈನ್ ಅರ್ಜಿಯ ಲಿಂಕ್ ಕ್ಲಿಕ್ ಮಾಡಿ. ನಂತರ ಅಗತ್ಯ ಮಾಹಿತಿಗಳನ್ನು ತುಂಬಿ, ಅಪ್ಲಿಕೇಶನ್ ಪೂರ್ಣಗೊಳಿಸಿ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.