ಬಲವಂತದ ಲೈಂಗಿಕ ಕ್ರಿಯೆಗೆ ಒಪ್ಪದ ಪಕ್ಕದ್ಮನೆಯಾಕೆಯ ಉಸಿರುಗಟ್ಟಿಸಿ ಕೊಲೆ ಮಾಡಿದ ಯುವಕ| ಕೊಲೆಯ ಕೇಸ್ ಸುಳಿವು ನೀಡಿದ ಚಪ್ಪಲಿ!
ಲೈಂಗಿಕ ಕ್ರಿಯೆಗೆ ಒಪ್ಪದ ಮಹಿಳೆಯೋರ್ವಳನ್ನು ಕೊಂದು ಆಕೆಯದೇ ಮನೆಯ ಸೋಫಾ ಕಮ್ ಬೆಡ್ ನಲ್ಲಿ ತುಂಬಿಟ್ಟಿದ್ದ 25 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಯುವಕ 25 ವರ್ಷದ ಯುವಕ ವಿಶಾಲ್ ಘಾವತ್. ಮತ್ತು ಕೊಲೆಯಾದ ಮಹಿಳೆ 33 ವರ್ಷದ ಸುಪ್ರಿಯಾ ಕಿಶೋರ್ ಶಿಂಧೆ ಎಂದು ಗುರುತಿಸಲಾಗಿದೆ. ಈ ಘಟನೆ ಫೆ.15 ರಂದು ಮುಂಬೈನ ದೊಂಬಿವಾಲಿಯ ಡೇವಿಡ್ ಗೌನ್ ಏರಿಯಾದಲ್ಲಿ ನಿವಾಸದಲ್ಲಿ ಸುಪ್ರಿಯಾ ನಡೆದಿದೆ.
ಆರೋಪಿ ವಿಶಾಲ್ ಮೃತ ಮಹಿಳೆಯ ಪಕ್ಕದ ಮನೆಯ ನಿವಾಸಿ. ಪರಸ್ಪರ ಇಬ್ಬರೂ ಪರಿಚಿತರು. ಸುಪ್ರಿಯಾ ಮನೆಯಲ್ಲಿ ಒಬ್ಬಳೇ ಇದ್ದಾಗ ವಿಶಾಲ್ ಮನೆಗೆ ಬಂದು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಕೋಪಗೊಂಡ ವಿಶಾಲ್ ಚೂಪಾದ ಆಯುಧದಿಂದ ಆಕೆಯ ತಲೆಗೆ ಬಲವಾಗಿ ಹೊಡೆದು ಮತ್ತು ನೈಲಾನ್ ಹಗ್ಗದಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಕೊಲೆಯಾದ ದಿನ ಸುಪ್ರಿಯಾ ಅವರ ಪತಿ ಎಂದಿನಂತೆ ಕೆಲಸಕ್ಕೆಂದು ಹೋಗಿದ್ದ. ಮಗ ಕೂಡಾ 12.30 ಕ್ಕೆ ಶಾಲೆಗೆ ಹೋಗಿದ್ದ.
ಕೊಲೆಯಾದ ಬಳಿಕ ಅಕ್ಕಪಕ್ಕದ ಮನೆಯವರ ವಿಚಾರಣೆ ನಡೆಸಿದಾಗ ಸುಪ್ರಿಯಾ ಮನೆಯ ಹೊರಭಾಗದಲ್ಲಿ ವಿಶಾಲ್ ಚಪ್ಪಲಿ ನೋಡಿದ್ದಾಗಿ ಅಕ್ಕಪಕ್ಕದವರು ಹೇಳಿದ್ದರು. ಯಾವ ರೀತಿಯ ಚಪ್ಪಲಿ ಎಂಬುದನ್ನು ಕೂಡಾ ವಿವರಿಸಿ ಹೇಳಿದ್ದಾರೆ. ಇದೇ ಚಪ್ಪಲಿ ಧರಿಸಿ ಅನೇಕ ಬಾರಿ ವಿಶಾಲ್ ಸುಪ್ರಿಯಾ ಮನೆಗೆ ಬಂದಿದ್ದ. ಈ ಆಧಾರದಲ್ಲಿ ವಿಶಾಲ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ತಪ್ಪೊಪ್ಪಿಕೊಂಡಿದ್ದಾನೆ.
ಕೊಲೆ ಮಾಡಿದ ಹಿಂದಿನ ದಿನ ಫೆ.14 ರಂದು ಪುಸ್ತಕ ಕೊಡುವ ನೆಪದಲ್ಲಿ ಆರೋಪಿ ವಿಶಾಲ್, ಸುಪ್ರಿಯಾ ಮನೆಗೆ ಭೇಟಿ ನೀಡಿದ್ದ. ಈ ವೇಳೆ ಆಕೆಯ ಮಗನನ್ನು ನೋಡಿ ಶಾಲೆಗೆ ಹೋಗುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದ. ಬಳಿಕ ವಾಪಾಸ್ಸು ಹೋಗಿದ್ದ. ಇದಾದ ಮಾರನೇ ದಿನ ಅಂದರೆ ಫೆ.15 ರಂದು ಮಧ್ಯಾಹ್ನ 1.30 ರ ಸುಮಾರಿಗೆ ಮತ್ತೆ ಸುಪ್ರಿಯಾ ಒಬ್ಬಳೇ ಇರುವುದನ್ನು ನೋಡಿದ ವಿಶಾಲ್ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆದರೆ, ಆತನನ್ನು ವಿರೋಧಿಸಿ ಕೂಗುತ್ತಾ ಬಾಗಿಲ ಬಳಿಗೆ ಆಕೆ ಓಡುವುದನ್ನು ನೋಡಿದ ವಿಶಾಲ್, ಕೂದಲನ್ನು ಹಿಡಿದೆಳೆದು ಆಯುಧದಿಂದ ಆಕೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಬಳಿಕ ನೈಲಾನ್ ಹಗ್ಗದಿಂದ ಆಕೆಯ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆಮಾಡಿದ್ದಾನೆ. ನಂತರ ಮೃತದೇಹವನ್ನು ಆಕೆಯ ಮನೆಯ ಸೋಫಾ ಕಮ್ ಬೆಡ್ ನಲ್ಲಿ ಇಟ್ಟಿದ್ದಾನೆ. ಸುಪ್ರಿಯಾ ಪತಿ ಮನೆಗೆ ಬಂದು ಹುಡುಕಿದಾಗ ಕಾಣದೇ ಇದ್ದಾಗ, ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಿದ್ದಾನೆ. ವಿಶೇಷ ಏನೆಂದರೆ ನಾಪತ್ತೆ ದೂರು ದಾಖಲಿಸುವಾಗ ಸುಪ್ರಿಯಾ ಪತಿಯ ಜತೆಯಲ್ಲೇ ಆರೋಪಿ ವಿಶಾಲ್ ಕೂಡಾ ಜೊತೆಗೆ ಬಂದಿದ್ದ. ತನಗೇನೂ ಗೊತ್ತೇ ಇಲ್ಲ ಎಂಬಂತೆ ನಟನೆ ಮಾಡಿದ್ದ.
ಇದಾದ ನಂತರ ಸುಪ್ರಿಯಾ ಪತಿ ಮತ್ತು ಮಗ ಮನೆಯಲ್ಲಿ ಇರುವಾಗ ಸೋಫಾ ಕಂ ಬೆಡ್ ಏರುಪೇರಾಗಿರುವುದನ್ನು ಗಮನಿಸಿ ಅದನ್ನು ಸರಿಪಡಿಸಲು ಹೋದಾಗ ಮೃತದೇಹ ಪತ್ತೆಯಾಗಿದೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಶಾಲ್ ನನ್ನು ಪೊಲೀಸರು ಬಂಧಿಸಿದ್ದಾರೆ.