ಮಂಗಳೂರು : ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರ ಬಂಧನ| ಕೊಣಾಜೆ ಪೊಲೀಸರಿಂದ ತ್ವರಿತ ಕಾರ್ಯಾಚರಣೆ

ಮಂಗಳೂರು : ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರನ್ನು ಕೊಣಾಜೆ ವ್ಯಾಪ್ತಿಯ ಮಂಜನಾಡಿ ಗ್ರಾಮದ ಉರುಮನೆ ಕ್ರಾಸ್ ಎಂಬಲ್ಲಿ ಬಂಧಿಸಲಾಗಿದೆ.

ಆರೋಪಿಗಳಿಂದ 1 ಕೆಜಿ 340 ಗ್ರಾಂನಷ್ಟು ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ವರ್ಕಾಡಿ ಗ್ರಾಮದ ಹನೀಫ್, ವರ್ಕಾಡಿ ಸಮೀಪದ ಕೆ ಸಿ ರೋಡ್ ನ ಹನೀಫ್, ಮಂಜೇಶ್ವರ ಗ್ರಾಮದ ನಸೀಬ್ ಎಂದು ಗುರುತಿಸಲಾಗಿದೆ.

ಈ ಗಾಂಜಾ ಮೌಲ್ಯ ರೂ.13,400 ಆಗಿದ್ದು, ಗಾಂಜಾ ಸಾಗಿಸಲು ಬಳಸಿಕೊಂಡ ವಾಹನದ ಮೌಲ್ಯ 25000 ಅಂದಾಜಿಸಲಾಗಿದೆ.

ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.