ಗ್ರಾಹಕರಿಗೆ ಸಿಹಿ ಸುದ್ದಿ |ಟೆಲಿಕಾಂ ಕಂಪನಿಯ ಪ್ರೀಪೇಯ್ಡ್ ವೋಚರ್ 28 ದಿನಗಳ ಬದಲು 30 ದಿನ ಮಾಡಲು TRAI ಸೂಚನೆ| ಟೆಲಿಕಾಂ ಕಂಪನಿಗಳ ಕುತಂತ್ರಕ್ಕೆ ಎದಿರೇಟು |

ಟೆಲಿಕಾಂ ಕಂಪನಿಗಳು 28 ದಿನಗಳ ಬದಲಿಗೆ 30 ದಿನಗಳ ಮಾನ್ಯತೆಯನ್ನು ನೀಡಲು ಟ್ರಾಯ್ ಇತ್ತೀಚೆಗಷ್ಟೇ ಆದೇಶ ನೀಡಿತ್ತು. ಈಗ ದೇಶದ‌ ಮೊಬೈಲ್ ಬಳಕೆದಾರರು ಬಹುತೇಕ ಈ ಸೌಲಭ್ಯವನ್ನು ಪಡೆಯಲಿದ್ದಾರೆ. 28 ದಿನಗಳ ಬದಲಿಗೆ 30 ದಿನಗಳ ಮಾನ್ಯತೆಯನ್ನು ನೀಡಲು ಟೆಲಿಕಾಂ ಕಂಪನಿಗಳು ವಿರೋಧಿಸುತ್ತಿದ್ದರೂ ಪೋಸ್ಟ್ ಪೇಯ್ಡ್ ಟ್ಯಾರಿಫ್ ನಲ್ಲಿ ಬಿಲ್ಲಿಂಗ್ ಸೈಕಲ್ ಮಾಸಿಕ ಆಧಾರದ ಮೇಲೆ ಇದೆ ಹಾಗಾಗಿ ಪ್ರಿಪೇಯ್ಡ್ ರೀಚಾರ್ಜ್ ನಲ್ಲಿ ಏಕೆ ಸಾಧ್ಯವಿಲ್ಲ ಎಂಬುದಾಗಿ ಟ್ರಾಯ್ ( TRAI) ಕೇಳಿದೆ. ಈಗ ಈ ಆದೇಶವನ್ನು ಪಾಲಿಸಲು ಟೆಲಿಕಾಂ ಕಂಪನಿಗಳಿಗೆ ಟ್ರಾಯ್ 60 ದಿನಗಳ ಕಾಲಾವಕಾಶವನ್ನು ನೀಡಿದೆ.

30 ದಿನಗಳ ವ್ಯಾಲಿಡಿಟಿ ಪ್ಲಾನ್ ಗಳಿಗೆ ಗ್ರಾಹಕರು ವರ್ಷಕ್ಕೆ 12 ಬಾರಿ ರೀಚಾರ್ಜ್ ಮಾಡಬೇಕಾಗುತ್ತದೆ. ಅದೇ 28. ದಿನಗಳ ವ್ಯಾಲಿಡಿಟಿ ಹೊಂದಿರುವ ಯೋಜನೆಗೆ ಬಳಕೆದಾರರು ವರ್ಷಕ್ಕೆ 13 ಬಾರಿ ರೀಚಾರ್ಜ್ ಮಾಡಬೇಕಾಗುತ್ತದೆ. ಗ್ರಾಹಕರು ಮಾಡುವ ಒಂದು ತಿಂಗಳ ಹೆಚ್ಚಿನ ರೀಚಾರ್ಜ್ ಟೆಲಿಕಾಂ ಕಂಪನಿಗಳಿಗೆ ಸಾವಿರಾರು ಕೋಟಿ ಆದಾಯ ನೀಡುತ್ತದೆ. ಇದು ಟೆಲಿಕಾಂ ಕಂಪನಿಗಳ ನಿಜವಾದ ಉದ್ದೇಶ.

ಈ ಹೊಸ ಆದೇಶದಿಂದ ಜನರಿಗೆ ಲಾಭ ಸಿಗಲಿ ಎನ್ನುವುದೇ ಟ್ರಾಯ್ ಉದ್ದೇಶ. ಈಗ ಟೆಲಿಕಾಂ ಕಂಪನಿಗಳು 30 ದಿನಗಳ ವ್ಯಾಲಿಡಿ ಹೊಂದಿರುವ ಯೋಜನೆಗಳಿಗೆ ಹೆಚ್ಚು ಬೆಲೆ ನಿಗದಿ ಪಡಿಸಿದರೆ ಲಾಭದ ಯೋಚನೆ ಇಲ್ಲ. ಆದರೆ ಟೆಲಿಕಾಂ ಕಂಪನಿಗಳ ಮಧ್ಯೆ ಪೈಪೋಟಿ ಆದರೆ ಇದರ ಸಂಪೂರ್ಣ ಲಾಭ ಗ್ರಾಹಕರಿಗೆ ದೊರೆಯಲಿದೆ.

30 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ಪ್ರೀಪೇಯ್ಡ್ ಪ್ಲ್ಯಾನ್ ಗಳನ್ನು ಎಲ್ಲಾ ಕಂಪನಿಗಳು ಮಾಡಲಿವೆ. ಆದರೆ 30 ದಿನಗಳ ವ್ಯಾಲಿಡಿಟಿ ಹೊಂದಿರುವ ಯೋಜನೆಗಳ ಸಂಖ್ಯೆ ಸೀಮಿತವಾಗಿರಬಹುದು. ಏಕೆಂದರೆ ಪ್ರತೀ ತಿಂಗಳು ಅದೇ ದಿನಾಂಕದಂದು ನವೀಕರಿಸಬಹುದಾದ ಕನಿಷ್ಠ ಒಂದು ಪ್ಲಾನ್ ವೋಚರ್, ಒಂದು ವಿಶೇಷ ಟ್ಯಾಕ್ಸ್ ವೋಚರ್ ಮತ್ತು ಒಂದು ಕಾಂಬೋ ವೋಚರ್ ಅನ್ನು ಒದಗಿಸಲು ಟೆಲಿಕಾಂ ಒಪ್ಪಿಕೊಂಡಿವೆ. ಇಲ್ಲಿ 28 ದಿನಗಳ ವ್ಯಾಲಿಡಿಟಿ ಯೋಜನೆಗಳು ನಿಷೇಧವಾಗಿರುತ್ತದೆ.

Leave A Reply

Your email address will not be published.