ಬೆಳಗಿನ ಜಾವದ ಈ ಸಮಯದಲ್ಲೇ ಹೆಚ್ಚು ಸಾವು ಸಂಭವಿಸುವುದು -ಅಧ್ಯಯನ ವರದಿ
ಬೆಳಗಿನ ಜಾವದ 3 ರಿಂದ 4ರ ಸಮಯವು ಮನುಷ್ಯನಿಗೆ ಅತ್ಯಂತ ಅಪಾಯಕಾರಿಯಾಗಿದೆ ಎಂಬ ಅಂಶಕ್ಕೆ ಸಂಬಂಧಿಸಿದ ಸತ್ಯಗಳನ್ನು ಸಂಗ್ರಹಿಸಲು ತಜ್ಞರು ಪ್ರಯತ್ನಿಸಿದ್ದು, ಈ ಸಂಬಂಧ ಅಧ್ಯಯನ ಕೂಡ ನಡೆಸಿದ್ದಾರೆ.
ಬೆಳಗಿನ ಜಾವದ ಸಮಯ 3 ರಿಂದ 4 ಗಂಟೆಗಳ ನಡುವೆ ಆಸ್ತಮಾ ಕೂಡ ಹೆಚ್ಚುತ್ತದೆ . ಅಲ್ಲದೇ ಇದರ ಅಪಾಯವು 300 ಪಟ್ಟು ಹೆಚ್ಚಾಗಿರುತ್ತದೆ ಎಂದು ಸಂಶೋಧನೆ ತೋರಿಸಿದೆ.
ಆ ಸಮಯದಲ್ಲಿ ದೇಹದಲ್ಲಿ ಅಡಿನಾಲಿನ್ ಮತ್ತು ಉರಿಯೂತ ನಿವಾರಕ ಹಾರ್ಮೋನುಗಳ ಸ್ರವಿಸುವಿಕೆಯು ಬಹಳ ಕಡಿಮೆಯಾಗುತ್ತದೆ. ಈ ಮೂಲಕ ದೇಹದಲ್ಲಿ ಉಸಿರಾಟದ ವ್ಯವಸ್ಥೆಯನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡವೂ ಈ ವೇಳೆ ಕಡಿಮೆಯಾಗಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.
ಆದ್ದರಿಂದ ಹೆಚ್ಚಿನ ಸಾವುಗಳು ಮುಂಜಾನೆ 3-4 ಗಂಟೆಯೊಳಗೆ ಸಂಭವಿಸುತ್ತವೆ. ಎನ್.ವೈ.ಯು. ಲಾಂಗನ್ ಮೆಡಿಕಲ್ ಸೆಂಟರ್ ಡಾ. ರೋಶ್ನಿ ರಾಜ್ ಪ್ರಕಾರ, ಬೆಳಿಗ್ಗೆ 6 ಗಂಟೆಗೆ ಕಾರ್ಟಿಸೋಲ್ ಹಾರ್ಮೋನ್ ಅತಿಯಾದ ಸ್ರವಿಸುವಿಕೆಯು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಅಪಸ್ಮಾರದ ಆಪಾಯವನ್ನು ಹೆಚ್ಚಿಸುತ್ತದೆ.
ಈ ವರದಿಯ ಪ್ರಕಾರ, ಅಧಿಕ ರಕ್ತದೊತ್ತಡವು 9 ಗಂಟೆಗೆ ಸಂಭವಿಸುತ್ತದೆ. ಇದು ಕೂಡ ಸಾವಿಗೆ ಕಾರಣವಾಗಬಹುದು. ಬೆಳಗ್ಗೆ 6 ರಿಂದ 12 ಗಂಟೆಯ ನಡುವೆ ಹೃದಯಾಘಾತದ ಅಪಾಯ ತುಂಬಾ ಹೆಚ್ಚು ಎನ್ನುತ್ತಾರೆ.