ಐದು ವರ್ಷದ ಬಳಿಕ ಮೊಸಳೆಯ ಕುತ್ತಿಗೆಯಲ್ಲಿ ಸಿಲುಕಿದ್ದ ಟೈರ್ ಹೊರತೆಗೆಯಲು ಯಶಸ್ವಿಯಾದ ವ್ಯಕ್ತಿ

ಪ್ರಾಣಿಗಳು ಅದೆಷ್ಟೇ ಭಯಾನಕವಾಗಿದ್ದರೂ ಕೆಲವೊಮ್ಮೆ ಜೀವಸಂಕಟಕ್ಕೆ ಒಳಗಾಗಿ ಬಿಡುತ್ತವೆ. ಅಂತಹ ಸಂದರ್ಭದಲ್ಲಿ ಅವುಗಳನ್ನು ರಕ್ಷಿಸುವುದು ಮಾನವರ ಹೊಣೆಯಾಗಿರುತ್ತದೆ. ಇದೀಗ ಮೊಸಳೆಯ ಕುತ್ತಿಗೆಯಲ್ಲಿ ಸಿಲಿಕಿದ್ದ ಬೈಕ್‌ನ ಟೈರ್‌ನ್ನು ಬರೋಬ್ಬರಿ 6 ವರ್ಷಗಳ ಬಳಿಕ ಹೊರತೆಗೆದು ಮೊಸಳೆಯನ್ನು ರಕ್ಷಿಸಲಾಗಿದೆ.

ಈ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ಮೊಸಳೆಯನ್ನು ಹಿಡಿದು ಟೈರ್‌ನ್ನು ಹೊರತೆಗೆದಿದ್ದಾರೆ. ವ್ಯಕ್ತಿಯ ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಇಂಡೋನೇಷ್ಯಾದ ತಿಳಿ ಎನ್ನುವ 35 ವರ್ಷದ ಪ್ರಾಣಿ ಪ್ರಿಯ ವ್ಯಕ್ತಿ ಮೊಸಳೆಯ ಕುತ್ತಿಗೆಗೆ ಸಿಲುಕಿದ್ದ ಟೈರ್‌ನ್ನು ಹೊರತೆಗೆದಿದ್ದಾರೆ. 2018ರಲ್ಲಿ 2018ರಲ್ಲಿ ಮೊಸಳೆಯ ಕುತ್ತಿಗೆಗೆ ಟೈರ್ ಸಿಲುಕಿಕೊಂಡಿತ್ತು ಎನ್ನಲಾಗಿದೆ.

ಈ ಹಿಂದೆ ಹಲವರು ಮೊಸಳೆಯನ್ನು ಟೈರ್‌ನಿಂದ ಮುಕ್ತಿಗೊಳಿಸಲು ಯತ್ನಿಸಿದ್ದು, ವಿಫಲರಾಗಿದ್ದಾರೆ ಎನ್ನಲಾಗಿದೆ. ಇದೀಗ 35 ವರ್ಷದ ತಿಲಿ ಎನ್ನುವ ವ್ಯಕ್ತಿ ಮರದ ದಿಮ್ಮಿಯ ಮೂಲಕ ಮೊಸಳೆಯನ್ನು ಸೆರೆಹಿಡಿದು, ಕಣ್ಣಿಗೆ ಬಟ್ಟೆಯನ್ನು ಸುತ್ತಿ, ಗರಗಸದ ಮೂಲಕ ಟೈರ್‌ ಅನ್ನು ಹೊರತೆಗೆದಿದ್ದಾರೆ.

Leave A Reply

Your email address will not be published.