ಗಂಡನ ಸಾವಿನ ಬಳಿಕ ಒಬ್ಬಂಟಿಯಾದ ಪತ್ನಿ| ಆಸರೆಯಿಲ್ಲದ ಆಕೆಯನ್ನು ಮದುವೆಯಾಗುವ ಮೂಲಕ ಬಾಳು ಬೆಳಗಿಸಿದ ತಮ್ಮ
ಬೆಳಗಾವಿ:ಕೊರೋನ ಸೋಂಕಿಗೆ ತುತ್ತಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಅಣ್ಣನ ಸಾವಿನ ಬಳಿಕ ವಿಧವೆಯಾಗಿದ್ದ ಅತ್ತಿಗೆಯ ಕತ್ತಲ ಬಾಳಿಗೆ ಮದುವೆಯಾಗುವ ಮೂಲಕ ತಮ್ಮ ಆಸರೆಯಾದ ಘಟನೆ ಮಹಾರಾಷ್ಟ್ರದ ಅಕೋಲೆ ತಾಲೂಕಿನ ಧೋಕ್ರಿಯದಲ್ಲಿ ನಡೆದಿದೆ.
ಕಳೆದ ವರ್ಷ ಆಗಸ್ಟ್ನಲ್ಲಿ 31 ವರ್ಷದ ನೀಲೇಶ್ ಸೇಠ್ ಬಲಿಯಾಗಿದ್ದು,ಗಂಡನನ್ನು ಕಳೆದುಕೊಂಡು 23 ವರ್ಷದ ಪೂನಂ ಹಾಗೂ ಆಕೆಯ 19 ತಿಂಗಳ ಮಗು ಆಸರೆಯಿಲ್ಲದಂತಾಗಿದ್ದರು.ಇದೀಗ ಗ್ರಾಮಸ್ಥರ ಸಮ್ಮುಖದಲ್ಲಿ ನೀಲೇಶ್ ಸಹೋದರ ಸಮಾಧಾನ್ ಪೂನಂ ಕೈ ಹಿಡಿಯುವ ಮೂಲಕ ಅವರ ಬದುಕಿಗೆ ಆಸೆಯಾಗಿದ್ದಾರೆ.
ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟ ಪೂನಂ ಹಾಗೂ ಸಮಾಧಾನ್ಗೆ ಗ್ರಾಮಸ್ಥರು ಶುಭ ಹಾರೈಸಿದ್ದಾರೆ. ಅಲ್ಲದೆ, ಸಮಾಧಾನ್ ನಡೆಗೆ ಸಾಕಷ್ಟು ಮೆಚ್ಚುಗೆಗಳು ಕೂಡ ವ್ಯಕ್ತವಾಗುತ್ತಿದೆ.ಆಕೆಯ ಒಬ್ಬಂಟಿ ತನ ನೋಡಲಾರದೆ ಆಕೆಯ ಬಾಳಿಗೆ ಆಸರೆಯಾಗಿ ನಿಂತಿದ್ದಾನೆ ತಮ್ಮ.