ರಾಜ್ಯ ರಾಜಕೀಯದಲ್ಲಿ ಕಿಡಿ ಹೊತ್ತಿಸಿದ ಹಿಜಾಬ್ ವಿವಾದ | ಕರಾವಳಿಯನ್ನು ಯಾವುದೇ ಕಾರಣಕ್ಕೂ ಮತ್ತೊಂದು ತಾಲಿಬಾನ್ ಆಗಲು ಬಿಡಲ್ಲ ಎಂದು ಗುಡುಗಿದ ಸುನಿಲ್ ಕುಮಾರ್ !!

ಹಿಜಾಬ್ ವಿವಾದ ಇದೀಗ ರಾಜ್ಯ ರಾಜಕೀಯದಲ್ಲಿ ದೊಡ್ಡ ಕಿಚ್ಚು ಹಚ್ಚಿಸುವ ಹಾಗೆ ಕಾಣಿಸುತ್ತಿದೆ. ಹಿಜಾಬ್ ಪರವಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆ ನೀಡುತ್ತಿದ್ದಂತೆ ಸಮವಸ್ತ್ರ ವಿವಾದವನ್ನು ತಾಲಿಬಾನ್ ಹಂತಕ್ಕೆ ಹೋಲಿಸಿ ಬಿಜೆಪಿಯೂ ರಾಡಿ ಎಬ್ಬಿಸಿದ್ದು, ಯಾವುದೇ ಕಾರಣಕ್ಕೂ ಮಂಗಳೂರು, ಉಡುಪಿಯನ್ನು ಮತ್ತೊಂದು ತಾಲಿಬಾನ್ ಆಗಲು ಬಿಡಲ್ಲ ಎಂದು ಸಚಿವ ಸುನೀಲ್ ಕುಮಾರ್ ಗುಡುಗಿದ್ದಾರೆ.

ಧರ್ಮದ ಕಾರಣಕ್ಕೆ, ಮತೀಯವಾದದ ಕಾರಣಕ್ಕೆ ಹೀಗೆ ಇಷ್ಟ ಬಂದ ವಸ್ತ್ರ ಹಾಕಿಕೊಂಡು ಬರುವುದನ್ನು ನಾವು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಸರ್ಕಾರಿ ಶಾಲೆಗೆ ಶುಲ್ಕ ಕಟ್ಟೋಕೆ ಕಷ್ಟ ಅನ್ನೋ ಒಂದು ವಲಯದವರು ಕೋರ್ಟ್ ಗೆ ಹೋಗ್ತಾರೆ ಅಂದರೆ ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಿದ್ಧರಾಮಯ್ಯ, ಖಾದರ್, ಜಮೀರ್ ಮಾತನ್ನು ಕೇಳ್ತಿದ್ರೆ ಇದರ ಹಿಂದೆ ಅವರೇ ಇದ್ದಂತಿದೆ ಎಂದು ಸುನೀಲ್ ಕುಮಾರ್ ಆಪಾದಿಸಿದ್ದಾರೆ.

ಸಿದ್ಧರಾಮಯ್ಯನವ್ರೇ ಶಾಸಕ ರಘುಪತಿ ಭಟ್ ಯಾವೋನೋ ಅಲ್ಲ. ಅವರು ಎಸ್‍ಡಿಎಂಸಿ ಅಧ್ಯಕ್ಷರು. ಅವರಿಗೆ ಹೇಳೋಕೆ ಅಧಿಕಾರ ಇದೆ ಸಚಿವ ಬಿಸಿ ನಾಗೇಶ್ ತಿರುಗೇಟು ನೀಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡ್ತಿದ್ದಾರೆ. ಮೋದಿ ಜನಪ್ರಿಯತೆ ತಡೆಯಲು ಇಂತಹ ಕೃತ್ಯ ಮಾಡ್ತಿದ್ದಾರೆ ಎಂದು ಬಿಸಿ ನಾಗೇಶ್ ಆರೋಪಿಸಿದ್ದಾರೆ.

ಇತ್ತ ಸಿಟಿ ರವಿ ಟ್ವೀಟ್ ಮಾಡಿ, ಇಂದು ಅವರು ಹಿಜಾಬ್ ಧರಿಸಿ ಶಾಲೆಗೆ ಹೋಗಲು ಅನುಮತಿ ಕೇಳೋರು ನಾಳೆ ಷರಿಯಾ ಕಾನೂನಿಗೂ ಒತ್ತಾಯ ಮಾಡುತ್ತಾರೆ. ನೀವು ಶಾಲೆಯ ನಿಯಮ ಅನುಸರಿಸಿ, ಇಲ್ಲ ಅಂದ್ರೆ ಶಾಲೆಗೆ ಹೋಗೋದನ್ನೇ ನಿಲ್ಲಿಸಿ ಎಂದು ಹೇಳಿದ್ದಾರೆ. ಸಚಿವ ಈಶ್ವರಪ್ಪ ಅಂತೂ, ಮುಸಲ್ಮಾನರು ಕಾಂಗ್ರೆಸ್ ಬಿಟ್ಟರೆ ಕಾಂಗ್ರೆಸ್ ಉಸಿರು ಗಟ್ಟಿ ಸತ್ತೇ ಹೋಗುತ್ತದೆ ಎಂದು ಲೇವಡಿ ಮಾಡಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಮಾತ್ರ, ಈ ಬಗ್ಗೆ ನಾನೇನು ಪ್ರತಿಕ್ರಿಯೆ ಕೊಡಲ್ಲ ಎಂದಿದ್ದಾರೆ. ಈ ಮಧ್ಯೆ ಮುಸ್ಲಿಂ ವಿದ್ಯಾರ್ಥಿನಿಯರ ಹೋರಾಟದ ಹಿಂದೆ ಎಸ್‍ಡಿಪಿಐ, ಪಿಎಫ್‍ಐ, ಎಂಐಎಂ ಸಂಘಟನೆಗಳಿವೆ. ಶಿಕ್ಷಣದಲ್ಲಿ ಇಸ್ಲಾಮೀಕರಣ ಮಾಡಲಾಗುತ್ತಿದೆ. ಸರ್ಕಾರ ಇದಕ್ಕೆ ಅವಕಾಶ ಮಾಡಿ ಕೊಡಬಾರದು ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.

Leave A Reply

Your email address will not be published.