ಪ್ರೇಯಸಿ ತನ್ನೊಂದಿಗೆ ಇರಬೇಕೆಂದು ಬಯಸಿದಾತ ಮಾಡಿದ ಉಪಾಯ ಏನು ಗೊತ್ತಾ!? | ಈ ಐಡಿಯಾದಿಂದ ಆತ ಮಾಡಿಕೊಂಡ ಯಡವಟ್ಟು ಮಾತ್ರ ಅಷ್ಟಿಷ್ಟಲ್ಲ

Share the Article

ಗೆಳತಿ ಸದಾ ತನ್ನೊಂದಿಗೆ ಇರಬೇಕೆಂದು ಬಯಸುವ ಯುವಕರು ಅದೆಷ್ಟೋ ಇದ್ದಾರೆ. ಪ್ರತಿದಿನವೂ ಪ್ರೇಯಸಿಯನ್ನು ಭೇಟಿಮಾಡುವ ಪ್ರೇಮಿಗಳ ಸಂಖ್ಯೆಯೂ ಹೆಚ್ಚಾಗೇ ಇದೆ. ಅಂತೆಯೇ ಇಲ್ಲೊಬ್ಬ ಪಾಗಲ್ ಪ್ರೇಮಿ ‌ ಗೆಳತಿ ತನ್ನೊಂದಿಗೆ ಇರಬೇಕೆಂದು ಆಕೆಯನ್ನು ಟ್ರಾವೆಲ್ ಬ್ಯಾಗ್‍ನಲ್ಲಿ ತುಂಬಿಕೊಂಡು ಹಾಸ್ಟೆಲ್‍ಗೆ ಕರೆತಂದು ಸಿಕ್ಕಿಬಿದ್ದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ತನ್ನ ಗೆಳತಿಯನ್ನು ಹಾಸ್ಟೆಲ್‍ಗೆ ದೊಡ್ಡ ಟ್ರಾವೆಲ್ ಬ್ಯಾಗ್‍ನಲ್ಲಿ ತುಂಬಿಕೊಂಡು ಹೋಗಿದ್ದಾನೆ. ಗೇಟ್‍ನಲ್ಲಿ ಸೆಕ್ಯೂರಿಟಿ ಗಾರ್ಡ್ ಗಳು ಚೆಕ್ ಮಾಡಿದ್ದಾರೆ. ಈ ಸಂದರ್ಭ ಟ್ರಾವೆಲ್ ಬ್ಯಾಗ್ ಎತ್ತಿಕೊಂಡು ಓಡಲು ಯುವಕ ಪ್ರಯತ್ನಿಸಿದ್ದಾನೆ. ಇದರಿಂದ ಸಂಶಯಗೊಂಡು ಸೂಟ್ ಕೇಸ್ ತೆಗೆದು ನೋಡಿದಾಗ ಯುವತಿ ಹೊರಗೆ ಬಂದಿದ್ದಾಳೆ.

ಈ ದೃಶ್ಯ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಉಡುಪಿ ಜಿಲ್ಲೆಯ ಮಣಿಪಾಲ ವಿವಿಯ ಎಂಐಟಿ ಕ್ಯಾಂಪಸ್‍ನ ವೀಡಿಯೋ ಎಂದು ಸುದ್ದಿ ಹರಿದಾಡುತ್ತಿತ್ತು. ಆದರೆ ಇದು ಎರಡು ವರ್ಷಗಳ ಹಿಂದಿನ ಹಳೆಯ ವೀಡಿಯೋ ಆಗಿದ್ದು ಮಣಿಪಾಲದ ವೀಡಿಯೋ ಅಲ್ಲ ಎಂದು ವರದಿಯಾಗಿದೆ.

2019ರಲ್ಲಿ ಈ ವೀಡಿಯೋ ವೈರಲ್ ಆಗಿತ್ತು. ಈ ವೀಡಿಯೋ ಡೆಹ್ರಾಡೂನ್‍ನದ್ದು ಎಂದು ಹೇಳಲಾಗುತ್ತಿದೆ. ಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದಂತೆ ಟ್ರೋಲ್ ಪೇಜ್‍ಗಳಲ್ಲಿ ಈ ವೀಡಿಯೋವನ್ನು ಮತ್ತೆ ಇದೀಗ ಹರಿ ಬಿಡಲಾಗಿದೆ.

Leave A Reply