ಯುವ ಉದ್ಯಮಿಯ ಯಶೋಗಾಥೆ – ಶರತ್ ಶೆಟ್ಟಿ
( ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಕನಸು ಕಟ್ಟಿದವರು)

ಬರಹ : ನೀತು ಬೆದ್ರ

ಜೀವನದಲ್ಲಿನ ಹುಮ್ಮಸ್ಸು, ಬುದ್ಧಿ ಬಂದಾಗಿನಿಂದ ಬೆಳೆಯುತ್ತಿರುವ ಮನುಷ್ಯನಿಗೆ ಒಂದಲ್ಲ ಒಂದು ಸ್ಪೂರ್ತಿಯ ಕಥೆ. ಒಂದು ಘಟನೆ ನಿಜವಾಗಿಯೂ ಉದಾಹರಣೆ ಇದ್ದೆ ಇರುತ್ತೇ. ಚಪ್ಪಲಿ ಹೊಲಿಯುವ ತಂದೆಯ ಮಗ ಅಮೇರಿಕಾದ ಅಧ್ಯಕ್ಷನಾಗುತ್ತಾನೆ. ತನ್ನ ಜೀವನ ಮುಕ್ಕಾಲು ಭಾಗ ಮುಗಿದು ಹೋಯ್ತು ಅನ್ನೊವಾಗ,ಒಬ್ಬ ಹಿರಿಜೀವ ಕೆ ಎಪ್ ಸಿ ಅನ್ನೋ ವಿಶ್ವಮಟ್ಟದ ಉದ್ಯಮ ಪ್ರಾರಂಭಿಸಿದ, ಹಕ್ಕ ಬುಕ್ಕ ಅನ್ನೋ ಸಹೋದರರು ವಿಜಯನಗರ ಸಾಮ್ರಾಜ್ಯವನ್ನೇ ಸ್ಥಾಪಿಸಿದರು. ಬೆಳೆಯೋಕೆ ಹಣ ಅಂತಸ್ತು ಬೇಕಿಲ್ಲ. ಒಂದು ಸ್ಪೂರ್ತಿಯ ಕಥೆ ಬೇಕು. ಇಷ್ಟೇಲ್ಲಾ ಉದಾಹರಣೆ ಕೊಡುತ್ತಿರುವಾಗ ನಾನಿಂದು ಪರಿಚಯಿಸುವ ವ್ಯಕ್ತಿ ಯಾವುದೇ ಕಲಾವಿದನಲ್ಲ. ತನ್ನ ಸ್ವಂತ ಪರಿಶ್ರಮದಿಂದ ಬೆಳೆದು ಬಂದ ಸಾಧಕ.

ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲದ ಸಮಯದಲ್ಲಿ ತಾನು ಕಲಿತು ತಾನೇ ಸಾಧಿಸಬೇಕು‌ ಅನ್ನೋ ಛಲ. ಕಲಿಕೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದವರು. ಹೆತ್ತವರ ಮಮತೆ,ಪ್ರೀತಿ,ವಾತ್ಸಲ್ಯವನ್ನು ಮನದೊಳಗೆ ಹುದುಗಿಟ್ಟುಕೊಂಡವರು. ಕಾಲವೆಲ್ಲವೂ ಡಿಜಿಟಲ್ ಮೀಡಿಯಾದೊಳಗೆ ಸೇರಿದೆ. ಗೂಗಲ್ ಅನ್ನೊಂದು ಕೆಲವೊಬ್ಬರಿಗೆ ಸಾಧನ ಅಷ್ಟೇ. ಇಲ್ಲೊಬ್ಬರಿಗೆ ಶಿಕ್ಷಣದ ಅಂಗ. ಅಲ್ಲಿಯೂ ಕಲಿಯಬಹುದು ಅನ್ನೊದು ಇವರಿಗೆ ಗೊತ್ತಿತ್ತು. ತಾನು ಕೂಡ ಬದುಕಿನಲ್ಲಿ ಮುನ್ನಡೆಯಬೇಕೆಂಬ ಇವರ ಛಲ ಇಂದು ಇವರನ್ನು ಮಾದರಿ ಉದ್ಯಮಿಯನ್ನಾಗಿ ಮಾಡಿದೆ. ಆ ನಗುಮೊಗದ ಸಾಧಕನ ಹೆಸರೇ ಶರತ್ ಶೆಟ್ಟಿ.

ಕೇರಳ ರಾಜ್ಯವಾದರೂ ತುಳು ಸಂಸ್ಕೃತಿಯ ಸೊಬಗನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡ ಜಿಲ್ಲೆಯ ಕಾಸರಗೋಡು. ಇಲ್ಲಿನ ಉಪ್ಪಳ ನಗರದ ಕರುವೋಳುವಿನ ದಾಮೋದರ ಶೆಟ್ಟಿ ಮತ್ತು ಭವಾನಿ ಶೆಟ್ಟಿ ಎಂಬ ದಂಪತಿಗಳ ಪ್ರೀತಿಯ ಸಂಕೇತವಾಗಿ ಹುಟ್ಟಿದ ಮಗುವೇ ಶರತ್‌‌. ತನ್ನ ಶಿಕ್ಷಣವನ್ನು ಕೆ.ವಿ.ಎಸ್.ಎಮ್.ಎಚ್.ಎಸ್. ಕುರುಡಪದವು ಜಿ.ಎಚ್,ಎಸ್.ಎಸ್ ಪೈವಳಿಕೆಯಲ್ಲಿ ತನ್ನ ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿದವರು. ತದ ನಂತರ ಪಿಲ್ಮ್ ಮೇಕಿಂಗ್ ಮತ್ತು ಕ್ರಿಯೆಟಿವ್ ಮೀಡಿಯಾವನ್ನು ಡಾವಿನ್ಸಿ ಮಂಗಳೂರಿನಲ್ಲಿ ಕಲಿತು, ಡಿಜಿಟಲ್ ಮಾರ್ಕೆಟಿಂಗ್ ನತ್ತ ಹೆಜ್ಜೆ ಹಾಕಿದರು.

ಇಂದಿನ ಮಕ್ಕಳು ಮೊಬೈಲ್ ಇಲ್ಲದೇ ತಾವಿಲ್ಲ ಅನ್ನೋ ಕಾಲ 90ರ ದಶಕದಲ್ಲಿ ಮೊಬೈಲ್ ಇಲ್ಲದೇ ತನ್ನ ಪರಿಸರದಲ್ಲಿಯೇ ಬೆಳೆದವರು ಇಂದು ಪ್ರಸಿದ್ದಿಯನ್ನು ಪಡೆದವರು. ಬಾಲ್ಯದಲ್ಲಿ ಬೆಳೆಯುವಾಗ ಸಿಕ್ಕ ಕೆಲಸವನ್ನು ಮಾಡುತ್ತಾ, ಅದರೊಂದಿಗೆ ಶಿಕ್ಷಣವನ್ನು ಪೂರೈಸುತ್ತಿದ್ದಾಗ, ಗೆಳೆಯರೊಬ್ಬರ ಮಾತಿನಂತೆ ಎಮ್ ಎಲ್ ಎಮ್ ನ ಬಗ್ಗೆ ತಿಳಿದಿಲ್ಲದೇ ಅಲ್ಲಿ ವ್ಯವಹಾರ ಮಾಡಲು ಪ್ರಾರಂಭಿಸುತ್ತಾರೆ. ನಂತರದ ದಿನಗಳಲ್ಲಿ ಅದರಲ್ಲಿ ಮೋಸ ಹೋಗಿ ತನ್ನ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಾರೆ. ಏನಾದರೂ ಸಾಧಿಸಬೇಕೆಂಬ ದೃಢ ಮನಸ್ಸಿನಿಂದ ಗೂಗಲ್ ಯೂಟ್ಯೂಬ್ ನೋಡುತ್ತಾ ಬೆಲೆಯುತ್ತಾ ಸಾಗುತ್ತಾರೆ. ಪ್ರಾರಂಭದ ದಿನಗಳಲ್ಲಿ ವೀಡಿಯೋ ಎಡಿಟರ್ ಆಗಿ ಸ್ಟುಡಿಯೋದಲ್ಲಿ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದ ಇವರು. ಪ್ರತಿ ಬಾರಿಯೂ ಬಿದ್ದಾಗ ದೃತಿಗೆಡಲಿಲ್ಲ. ನಾನು ಬೆಳೆಯಬೇಕು, ಏನಾದರೂ ಸಾಧಿಸಬೇಕೆಂದು. ಕಲ್ಲು ಮುಳ್ಳಿನ ಹಾಸಿಗೆಯಲ್ಲಿಯೇ ಹೊರಳಾಡಿದ ಶರತ್, ಯಾರು ನಂಬದ, ಯಾರಿಗೂ ವಿಶ್ವಾಸವಿರದ ರಂಗದಲ್ಲಿ ಕಣ್ಣೀರನ್ನು ನೆಲದ ಮೇಲೆ ಬೀಳಿಸಿದರು, ತನ್ನ ಪರಿಶ್ರಮದ ಬೆವರ ಹನಿ ಮಾಸಬಾರದೆಂದು ಬೆಳೆಯುತ್ತಾರೆ. ಸೋತು ಹತಾಶೆ ಹೊಂದುವ ಈ ಯುವಜನಾಂಗದ ನಡುವೆ ಎಲ್ಲಿ ಕಳೆದುಕೊಂಡೆನು, ಅಲ್ಲೇ ಎದ್ದು ನಿಲ್ಲಬೇಕೆಂದು ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಎಸ್ ಮೀಡಿಯಾ ಅನ್ನೋ ಸಂಸ್ಥೆಯನ್ನ ಕಟ್ಟಿದರು. ಹಂತ ಹಂತವಾಗಿ ತನ್ನ ಶ್ರಮದ ಮೂಲಕ ತಾನು ಕಟ್ಟಿದಂತಹ ಎಸ್ ಮೀಡಿಯಾವನ್ನು ಉನ್ನತವಾದ ದಿಕ್ಕಿನೆಡೆಯಲ್ಲಿ ಸಾಗುವಂತೆ ಮಾಡಿದರು ಈ ಸಂಸ್ಥೆಯನ್ನು ಕಳೆದ ಆರು ವರ್ಷದಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಇಂದು ತನ್ನ ಸ್ವಂತ ಪರಿಶ್ರಮದಿಂದ ಬೆಳೆದು ಬಂದಂತಹ ಎಸ್ ಮೀಡಿಯಾ ಹಲವಾರು ವಿದೇಶಿ ಗ್ರಾಹಕರನ್ನು ತನ್ನ ಕೆಲಸದ ನಿಷ್ಠತೆಯಿಂದ ಸೆಳೆದುಕೊಂಡು, ಇಲ್ಲಿಂದಲೇ ವಿದೇಶದಲ್ಲಿನ ಹಲವಾರು ಕಂಪನಿಗಳ ಬ್ರಾಂಡ್ ಪ್ರಾಮೊಷನ್ಸ್ ಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದವು. ಇವರ ಎಲ್ಲಾ ಶ್ರಮದಿಂದ ಇಂದು ತಾನು ಬಾಲ್ಯದಲ್ಲಿ ಕಟ್ಟಿಕೊಂಡಿದ್ದಂತಹ ಕನಸನ್ನು ನನಸು ಮಾಡಿದ್ದಾರೆ.

ತಾನು ಒಂದು ಒಳ್ಳೆ ಹೆಸರು ಸೂಚಿಸಬಲ್ಲ, ಭವಿಷ್ಯದಲ್ಲಿ ದೊಡ್ಡ ಮಟ್ಟದ ಕಂಪನಿ ಮತ್ತು ಸಂಸ್ಥೆಯ ಮಾಲೀಕನಾಗಬೇಕು. ಕೃಷಿ ಭೂಮಿಯನ್ನು ಹೊಂದಬೇಕೆಂಬ ಮಹದಾಸೆಯನ್ನು ಇಟ್ಟುಕೊಂಡಿರುವ ಶರತ್ ರವರು, ತನ್ನದೇ ಆದಂತಹ ಚಾರಿಟಿಯನ್ನು ಸ್ಥಾಪಿಸಬೇಕೆನ್ನುತ್ತಾರೆ. ಯುವಕರು ಇಂದು ತಿಳಿದಿಲ್ಲದೇ ಡಿಜಿಟಲ್ ಮಾಕೆಂಟಿಂಗ್ ನತ್ತ ಹೆಜ್ಜೆ ಹಾಕುತ್ತಿದ್ದಾರೆ. ಅದರ ಬಗ್ಗೆ ತಿಳಿಯಲು ಇಂದು ಕಷ್ಟವೇನಿಲ್ಲ. ಸಾದಕ-ಬಾದಕಗಳ ಬಗ್ಗೆ ಗಮನಹರಿಸಿ ಕೆಲಸ ನಿರ್ವಹಿಸಿದಲ್ಲಿ ಗೆಲ್ಲಲು ಖಂಡಿತ ಸಾಧ್ಯವೆನ್ನುತ್ತಾರೆ ಶರತ್ ಶೆಟ್ಟಿ. ಇವರ ಮುಂದಿನ ಜೀವನ ಇನ್ನೂ ಒಳ್ಳೆಯದಾಗಲಿ ಎನ್ನುವುದೇ ನನ್ನ ಆಶಯ.
ಕಷ್ಟ ಅಂದವರಿಗೆ ಎಲ್ಲನೂ ಕಷ್ಟವೇ. ಕೆಸರಿನಲ್ಲಿ ಬೆಳೆದರೂ ಸುವಾಸನೆ ಬೀರುವ, ಕಣ್ಣಿಗೆ ಮಹಾದಾನಂದ ಕೊಡುವಂತಹ ಹೂವಗಿ ಬೆಳೆದರೆ ತುಂಬಾನೇ ಚೆನ್ನ ಅಲ್ವಾ. ಬದುಕ ಬಾಳಬಂಡಿಯಲ್ಲಿ, ಜೀವನದ ನೊಗವ ತಾನೇ ಬಿತ್ತವರು ಶರತ್ ಶೆಟ್ಟಿ.

Leave A Reply

Your email address will not be published.