ಪುತ್ತೂರು : ಅರಿಯಡ್ಕದಲ್ಲಿ ಬಾವಿಗೆ ಬಿದ್ದು ಮಹಿಳೆ ಮೃತ್ಯು

ಪುತ್ತೂರು: ಮಹಿಳೆಯೋರ್ವರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಅರಿಯಡ್ಕ ಗ್ರಾಮದ ಪಯಂದೂರು ಎಂಬಲ್ಲಿ ಫೆ. 1ರಂದು ನಡೆದಿದೆ.

 

ಕೃಷಿಕ ನಾಗೇಶ್ ರೈ ಪಯಂದೂರುರವರ ಪತ್ನಿ ಸುನೀತಾ (43ವ) ಮೃತಪಟ್ಟವರು. ಬೆಳಗ್ಗಿನ ಜಾವ ನೀರು ತರಲೆಂದು ಹೋದವರು ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಮೃತರ ಪುತ್ರಿ ಶ್ರವಣರವರು ಪುತ್ತೂರು ಗ್ರಾಮಾಂತರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮೃತರು ಪತಿ ನಾಗೇಶ್ ರೈ, ಪುತ್ರ ಲಿಖಿತ್, ಪುತ್ರಿ ಶ್ರವಣರವರನ್ನು ಅಗಲಿದ್ದಾರೆ.

Leave A Reply

Your email address will not be published.