ಈತ 8 ಪತ್ನಿಯರ ಮುದ್ದಿನ ಗಂಡ !! ಎಲ್ಲರೂ ಒಟ್ಟಿಗೆ ಬಾಳೋ ಈತನ ಸಂಸಾರದಲ್ಲಿ ಇಲ್ಲಿವರೆಗೂ ಕಿತ್ತಾಟ ನಡೆದಿಲ್ಲವಂತೆ|ಸಂದರ್ಶನದಲ್ಲಿ ಮಾತಾಡಿದ ಈತನ ವಿಡಿಯೋ ವೈರಲ್

ಪತಿ ಪತ್ನಿ ಇಬ್ಬರೂ ಸುಖವಾಗಿ ಸಂಸಾರ ಮಾಡುವುದೇ ಈಗಿನ ಕಾಲದಲ್ಲಿ ದುಸ್ತರ. ಅದರಲ್ಲೂ ಈ ಗಂಡ ಹೆಂಡತಿಯ ಮಧ್ಯೆ ಇನ್ನೊಬ್ಬಳ ಎಂಟ್ರಿ ಆದರಂತೂ ಖಂಡಿತ ಆ ಕಥೆ ಊಹಿಸಲೂ ಅಸಾಧ್ಯ. ಅಂಥದರಲ್ಲಿ ಇಲ್ಲೊಬ್ಬ ಆಸಾಮಿ ಒಬ್ಬನೇ ಎಂಟು ಮಂದಿ ಹುಡುಗಿಯರನ್ನು ಮದುವೆ ಆಗಿದ್ದಾನೆ. ಇಷ್ಟು ಮಾತ್ರವಲ್ಲದೇ, ಎಲ್ಲರೂ ಒಂದೇ ಮನೆಯಲ್ಲಿ ಸುಖವಾಗಿ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಇದು ನಿಜವೇ ಹೌದೇ ಅನ್ನೋದನ್ನು ನಂಬುವುದು ಸ್ವಲ್ಪ ಕಷ್ಟನೇ. ಆದರೂ ನಂಬಬೇಕು. ಏಕೆಂದರೆ ಇದು ಸತ್ಯ.

ಇಂಥದ್ದೊಂದು ಸುಖ ಸಂಸಾರ ಇರುವುದು ಥಾಯ್ಲೆಂಡ್ ನಲ್ಲಿ. ಈ ಕುಟುಂಬದ ಯಜಮಾನ ವಂಗ್ ಡ್ಯಾಮ್ ಸೊರೊಟ್. ಈತನೇ ತನ್ನ ಎಂಟು ಮಂದಿ ಪತ್ನಿಯರ ಜೊತೆ ಸುಖವಾಗಿ ಯಾವುದೇ ಗದ್ದಲ ಗಲಾಟೆ ಇಲ್ಲದೇ ಸಂಸಾರ ನಡೆಸುತ್ತಿದ್ದಾನೆ. ಈತನ ಸಂಸಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಈತ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತನ್ನ ಸುಖ ಸಂಸಾರದ ಬಗ್ಗೆ ಮಾತನಾಡಿದ್ದಾನೆ. ನಾನು ವೃತ್ತಿಪರ ಟ್ಯಾಟೂ ಕಲಾವಿದ. ನನಗೆ ಎಂಟು ಮಂದಿ ಪತ್ನಿಯರಿದ್ದು ಎಲ್ಲರೂ ಒಟ್ಟಿಗೆ ನನ್ನೊಂದಿಗೆ ವಾಸವಾಗಿದ್ದಾರೆ. ಇಲ್ಲಿಯವರೆಗೆ ಯಾರೂ ಕಚ್ಚಾಡಿಕೊಂಡಿಲ್ಲ. ಪರಸ್ಪರ ಚೆನ್ನಾಗಿಯೇ ಇದ್ದಾರೆ. ಒಂದೇ ಕುಟುಂಬದವರಂತೆ ವಾಸ ಮಾಡುತ್ತಿದ್ದಾರೆ ” ಎಂದು ಹೇಳಿದ್ದಾನೆ‌. ಈ ವೀಡಿಯೋ ಯೂಟ್ಯೂಬ್ ನಲ್ಲಿಯೇ 30 ಮಿಲಿಯನ್ ಗಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ.

error: Content is protected !!
Scroll to Top
%d bloggers like this: