ಮಲ್ಪೆ ಬಂದರಿನಲ್ಲಿ 60 ಕೆಜಿ ತೂಕದ ಮಡಲು ಮೀನು ಬಲೆಗೆ !

ಮಲ್ಪೆ ಬಂದರಿನಲ್ಲಿ ಸನ್ಮಯ ಬೋಟಿನ ಬಲೆಗೆ 60 ಕೆಜಿ ತೂಕದ ಮಡಲು ಮೀನು ಸಿಕ್ಕಿದೆ. ಮಲ್ಪೆ ಬಂದರಿನಲ್ಲಿ ಈ ಮೀನನ್ನು ನೋಡಲು ಜನ ಜಮಾಯಿಸಿದ್ದರು. ಇದರ ಮಾಂಸ ತುಂಬಾ ರುಚಿಕರವಾಗಿರುತ್ತದೆ. ಈ ಮೀನು ಕೆ ಜಿ ಗೆ 120 ರೂಪಾಯಿಯಂತೆ ಮಾರಾಟವಾಗಿದೆ. ಇದು ಬಂಗುಡೆ, ಬೂತಾಯಿ, ಅಕ್ಟೋಪಸ್ ಇನ್ನಿತರ ಮೀನುಗಳನ್ನು ತಿನ್ನುತ್ತದೆ. ಇದರಲ್ಲಿ‌ ಮರ್ಲಿನ್ ಎಂಬ ಜಾತಿಯ ಮೀನೂ ಇದೆ. ಸಾಮಾನ್ಯವಾಗಿ 35 ಕೆ ಜಿ ವರೆಗೆ ಬಂದಿದ್ದರೂ ಈ ಮೀನು‌ 60 ಕೆ ಜಿ ಇರುವುದು ಬಲು ಅಪರೂಪ ಎಂದು ಹೇಳುತ್ತಾರೆ. ಈ ಮೀನನ್ನು ವೈಜ್ಞಾನಿಕವಾಗಿ ಸೈಲ್ ಮೀನು ಎಂದು ಕರೆಯಲಾಗುತ್ತದೆ. ಮಡಲು ಆಕೃತಿ ಹೊಂದಿರುವುದರಿಂದ ಈ ಮೀನನ್ನು ಮಡಲ್ ಮೀನು ಎಂದು ಕರೆಯುತ್ತಾರೆ.

ಈ ಮೀನು ಗಂಟೆಗೆ 110 ಕಿ.ಮೀ. ನಂತೆ ಜಗತ್ತಿನಾದ್ಯಂತ ಇತರ ಮೀನುಗಳಿಗಿಂತ ವೇಗವಾಗಿ ಚಲಿಸುತ್ತದೆ.

Leave A Reply

Your email address will not be published.