ಶಿಕ್ಷಕರಿಗೆ ವಿಶೇಷ ಜವಾಬ್ದಾರಿಯ ಆದೇಶ ಹೊರಡಿಸಿದ ರಾಜ್ಯ ಶಿಕ್ಷಣ ಇಲಾಖೆ|ಅದುವೇ ಕುಡುಕರನ್ನು ಪತ್ತೆ ಹಚ್ಚುವ ಕೆಲಸ!!

ಶಿಕ್ಷಕರು ಎಂದರೆ ಅವರಿಗೆ ಇರೋದು ಮಕ್ಕಳ ಜವಾಬ್ದಾರಿಯಾಗಿರುತ್ತದೆ.ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯಾವ ವಿಷಯ ತಿಳಿಸಿದರೆ ಸೂಕ್ತ, ಅವರಿಗೆ ಹೇಳೋ ಬುದ್ಧಿ ಮಾತು, ಶಾಲೆಗೆ ಬಾರದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವಂತಹ ಹಲವು ಜವಾಬ್ದಾರಿಗಳಿರುತ್ತದೆ. ಆದ್ರೆ ಇಲ್ಲಿಯ ಶಾಲೆಯ ಶಿಕ್ಷಕರಿಗೆ ಹೊಸತಾಗಿ ರಾಜ್ಯ ಶಿಕ್ಷಣ ಇಲಾಖೆ ಆದೇಶವನ್ನು ಹೊರಡಿಸಿದೆ.

ಅದುವೇ ಕುಡುಕರನ್ನು ಹಿಡಿಯುವ ಜವಾಬ್ದಾರಿ.ಬಿಹಾರದಲ್ಲಿ 2016ರಿಂದ ಸಂಪೂರ್ಣ ಪಾನನಿಷೇಧ ಜಾರಿಯಲ್ಲಿದ್ದು,ರಾಜ್ಯದಲ್ಲಿ ಎಲ್ಲೂ ಅಕ್ರಮ ಅಥವಾ ಸಕ್ರಮ ಮದ್ಯ ಸಿಗುವಂತಿಲ್ಲ. ಆದರೂ ಶಾಲೆಗಳ ಕಾಂಪೌಂಡ್ ಸೇರಿದಂತೆ ಅನೇಕ ಕಡೆ ಕುಡಿದು ಎಸೆದ ಸಾರಾಯಿ ಬಾಟಲಿಗಳು ಸಿಗುತ್ತಿವೆ. ಜನರು ಕುಡಿದು ತೂರಾಡುವುದು ಅಲ್ಲಲ್ಲಿ ಕಂಡುಬರುತ್ತಿದೆ.

ಹೀಗಾಗಿ ಬಿಹಾರ ಸರ್ಕಾರದ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ ಕುಮಾರ್‌ ಹೊರಡಿಸಿದ ಆದೇಶದ ಪ್ರಕಾರ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮದ್ಯ ಸೇವನೆ ಮಾಡುವವರು ಮತ್ತು ಮದ್ಯ ಪೂರೈಕೆ ಮಾಡುವವರ ವಿವರ ಸಂಗ್ರಹಿಸಿ, ಅಬಕಾರಿ ಇಲಾಖೆಗೆ ಸಲ್ಲಿಸಬೇಕಾಗುತ್ತದೆ. ಅದಕ್ಕಾಗಿ ಎರಡು ವಿಶೇಷ ಮೊಬೈಲ್‌ ಸಂಖ್ಯೆ ಮತ್ತು ಟೋಲ್‌ ಫ್ರೀ ನಂಬರ್‌ಗಳನ್ನು ಸಿದ್ಧಪಡಿಸಲಾಗಿದೆ.ಶಿಕ್ಷಕರಲ್ಲದೆ, ಶಾಲೆಯ ಇತರ ಸಿಬ್ಬಂದಿ ಮತ್ತು ಅದರ ಮೇಲುಸ್ತುವಾರಿ ಸಮಿತಿ ಸದಸ್ಯರಿಗೂ ಇಂಥವರನ್ನು ಕಡ್ಡಾಯವಾಗಿ ಪತ್ತೆ ಹಚ್ಚಿ ಮಾಹಿತಿ ನೀಡುವ ಹೊಣೆಗಾರಿಕೆ ವಹಿಸಲಾಗಿದೆ.

Leave A Reply

Your email address will not be published.