ವಿಕಲಾಂಗ ಮಹಿಳೆಯ ಮೇಲೆ ಟ್ರಾಫಿಕ್ ಪೊಲೀಸ್ ಅಧಿಕಾರಿಯ ದರ್ಪ!! ಹಿಗ್ಗಾಮುಗ್ಗಾ ಥಳಿಸಿ,ಬೂಟುಗಾಲಿನಿಂದ ಒದೆಯುವ ವೀಡಿಯೋ ವೈರಲ್

ಟೋಯಿಂಗ್ ವಾಹನದಲ್ಲಿ ಕುಳಿತಿದ್ದ ಸಂದರ್ಭದಲ್ಲಿ ವಿಕಲ ಚೇತನ ಮಹಿಳೆಯೊಬ್ಬರು ಕಲ್ಲು ಹೊಡೆದರೆಂದು ಆರೋಪಿಸಿ ಟ್ರಾಫಿಕ್ ಎಎಸ್ಐ ಒಬ್ಬರು ಮಹಿಳೆಗೆ ಹಿಗ್ಗಾ ಮುಗ್ಗ ಥಳಿಸಿದ್ದು, ಬೂಟು ಕಾಲಿನಲ್ಲಿ ಒದೆಯುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸಪ್ಪನ ದರ್ಪಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಘಟನೆಯ ಬಳಿಕ ಪ್ರಕರಣವು ತಿರುವು ಪಡೆದುಕೊಂಡಿದ್ದು,ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಮಹಿಳೆಯ ವಿರುದ್ಧವೇ ಹಲ್ಲೆ ನಡೆಸಿದ ಅಧಿಕಾರಿ ಎಸ್.ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮಹಿಳೆಯು ಅಧಿಕಾರಿಗೆ ಕಲ್ಲು ಹೊಡೆದಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದು ತಪ್ಪು. ಅದಲ್ಲದೇ ಮಹಿಳೆ, ಅದರಲ್ಲೂ ವಿಕಲಾಂಗ ಮಹಿಳೆಯ ಮೇಲೆ ಪುರುಷ ಪೊಲೀಸ್ ಕೈ ಮಾಡಲು ಅವಕಾಶಗಲಿಲ್ಲದಿದ್ದರೂ ತನ್ನ ಕರ್ತವ್ಯವನ್ನು ಮರೆತು ಹಿಗ್ಗಾ ಮುಗ್ಗ ಥಳಿಸಿ, ಬೂಟುಗಾಲಿನಿಂದ ಒದ್ದು ದರ್ಪ ಮೆರೆದ ಪೊಲೀಸ್ ಅಧಿಕಾರಿಯ ಮೇಲೆ ಕಾನೂನು ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.

Leave A Reply

Your email address will not be published.