ಪೆರುವೋಡಿ ದೇವಾಲಯ ಸಂಪರ್ಕ ರಸ್ತೆ : ದಾರಿ ಸೂಚಕ ಫಲಕ ಉದ್ಘಾಟನೆ
ಕಾಪು, ನೀರ್ಕಜೆಯಲ್ಲಿ ಯುವಸೇನೆ ವತಿಯಿಂದ ದಾರಿ ಸೂಚಕ ಫಲಕ ಕೊಡುಗೆ
ಮುಕ್ಕೂರು: ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಸಂಪರ್ಕ ರಸ್ತೆಯಲ್ಲಿ ಯುವಸೇನೆ ಮುಕ್ಕೂರು-ಪೆರುವಾಜೆ ವತಿಯಿಂದ ಕೊಡುಗೆಯಾಗಿ ನೀಡಲಾದ ದಾರಿ ಸೂಚಕ ಫಲಕವನ್ನು ಜ.30 ರಂದು ಉದ್ಘಾಟಿಸಲಾಯಿತು.
ಪೆರುವೋಡಿ ಸಂಪರ್ಕ ರಸ್ತೆಯ ಕಾಪು ಮತ್ತು ನೀರ್ಕಜೆ ಬಳಿ ದಾರಿ ಸೂಚಕ ನಿರ್ಮಿಸಿ ಲೋಕಾರ್ಪಣೆಗೊಳಿಸಲಾಯಿತು. ಯುವಸೇನೆ ಮುಕ್ಕೂರು-ಪೆರುವಾಜೆ ಇದರ ಅಧ್ಯಕ್ಷ ಸಚಿನ್ ರೈ ಪೂವಾಜೆ ಉಪಸ್ಥಿತಿಯಲ್ಲಿ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಅರ್ಚಕ ಸುರೇಶ್ ಉಪಾಧ್ಯಾಯ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಮೊಕ್ತೇಸರ ಕುಂಬ್ರ ದಯಾಕರ ಆಳ್ವ, ಪೆರುವಾಜೆ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಪ್ರಗತಿಪರ ಕೃಷಿಕ ರಾಮಚಂದ್ರ ಕೋಡಿಬೈಲು, ಅಜಪಿಲ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆ, ಆಪ್ಟಿಕಲ್ ಪೈಬೆರ್ ಎಂಜಿನಿಯರ್ ಯತೀಶ್ ಕಾನಾವುಜಾಲು, ಪೆರುವಾಜೆ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಪ್ರಕಾಶ್ ರೈ, ಜ್ಯೋತಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಸತ್ಯಪ್ರಸಾದ್ ಕಂಡಿಪ್ಪಾಡಿ, ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಮೊಕ್ತೇಸರರಾದ ಸುಜಾತ ವಿ ರಾಜ್, ಕುಶಾಲಪ್ಪ ಗೌಡ ಪೆರುವಾಜೆ, ಯುವಸೇನೆಯ ಧನಂಜಯ ನೀರ್ಕಜೆ, ಪ್ರಶಾಂತ್ ಬೊಮ್ಮೆಮಾರು, ಶರತ್ ನೀರ್ಕಜೆ, ಅಶೋಕ್ ರೈ ಪೂವಾಜೆ, ಗುರುಪ್ರಸಾದ್ ಬೊಮ್ಮೆಮಾರು, ಸಂದೀಪ್ ಕುಂಜಾಡಿ, ಸಚಿನ್ ನೀರ್ಕಜೆ, ಪವನ್ ನೀರ್ಕಜೆ, ದಿನೇಶ್ ನೀರ್ಕಜೆ ಮೊದಲಾದವರಿದ್ದರು.