ಈ ಊರಲ್ಲಿ ಪ್ರತಿದಿನ ಮೊಳಗುತ್ತೆ ರಾಷ್ಟ್ರಗೀತೆ | ನಾವೆಲ್ಲ ಒಂದೇ ಎನ್ನುವ ಭಾವನೆಗೆ ಎಲ್ಲರಿಂದಲೂ ಸಿಗುತ್ತೆ ಗೌರವ

ಗಣರಾಜ್ಯೋತ್ಸವದ ದಿನ ಮಾತ್ರವಲ್ಲ, ಸ್ವಾತಂತ್ರ್ಯ ದಿ‌ನಾಚರಣೆಯಂದು ಕೂಡಾ ಅಲ್ಲ ಈ ಊರಲ್ಲೊಂದು ಪ್ರತಿದಿನ ರಾಷ್ಟ್ರಗೀತೆಯನ್ನು ಮೊಳಗಿಸಲಾಗುತ್ತದೆ. ಏನಿದು ವಿಶೇಷ ಅಂತೀರಾ ? ಬನ್ನಿ ತಿಳಿಯೋಣ!

ತೆಲಂಗಾಣದ ನಲ್ಗೊಂಡ ಪಟ್ಟಣದಲ್ಲಿ ಪ್ರತಿ ದಿನ 8.30 ಕ್ಕೆ ಸರಿಯಾಗಿ ಪಟ್ಟಣದ 12 ಪ್ರಮುಖ ಜಂಕ್ಷನ್ ಗಳಲ್ಲಿ ರಾಷ್ಟ್ರಗೀತೆಯನ್ನು ಮೊಳಗಿಸಲಾಗುತ್ತದೆ. ಪ್ರತಿ ದಿನ ಬೆಳಿಗ್ಗೆ 52 ಸೆಕೆಂಡುಗಳ ಕಾಲ ನಿಂತು, ಎಲ್ಲಾ ನಾಗರಿಕರು ಏನೇ ಕೆಲಸ ಮಾಡುತ್ತಿದ್ದರೂ ಆ ಕೆಲಸವನ್ನು ಅಲ್ಲೇ ಬಿಟ್ಟು, ಸಲ್ಯೂಟ್ ಮಾಡಿ ರಾಷ್ಟ್ರಗೀತೆಗೆ ಗೌರವ ಸೂಚಿಸುತ್ತಾರೆ.

ಈ ವರ್ಷದ ಜನವರಿ 23 ರಿಂದ ಈ ಪಟ್ಟಣದಲ್ಲಿ ಈ ಹೊಸ ಕ್ರಮ ಜಾರಿಗೆ ತರಲಾಗಿದೆ. ಜನಗಣಮನ ಉತ್ಸವ ಸಮಿತಿಯ ಅಧ್ಯಕ್ಷರಾದ ಕರ್ನಾತಿ ವಿಜಯ್ ಕುಮಾರ್ ಹಾಗೂ ಅವರ ಸ್ನೇಹಿತರು ಒಂದಾಗಿ ಈ ಒಂದು ಉಪಕ್ರಮವನ್ನು ಈ ಪಟ್ಟಣದಲ್ಲಿ ಆರಂಭಿಸಿದ್ದಾರೆ. ಈ ಹೊಸ ಪದ್ಧತಿಯು ಎಲ್ಲಾ ಜಾತಿ ಮತ್ತು ಧರ್ಮದ ಜನರನ್ನು ಪ್ರತಿದಿನ ಬೆಳಿಗ್ಗೆ ರಾಷ್ಟ್ರಗೀತೆ ಹಾಡಲು ಪ್ರೇರಿಪಿಸುತ್ತದೆ.

ಎಲ್ಲರೂ ರಾಷ್ಟ್ರಗೀತೆಯನ್ನು ಒಟ್ಟಾಗಿ ಹಾಡುವ ಮೂಲಕ ನಾವೆಲ್ಲ ಒಂದೇ ಎಂದು ಸಂದೇಶ ಸಾರುವ ಸಲುವಾಗಿ ಈ ಜನತೆ ಈ ರೂಢಿಯನ್ನು ಮಾಡಿಕೊಂಡಿದ್ದಾರೆ.

Leave A Reply

Your email address will not be published.