ಬಂಟ್ವಾಳ : ತಾಳೆ ಮರದಿಂದ ಬಿದ್ದು ಮೂರ್ತೆದಾರ ಪ್ರಕಾಶ್ ಮೃತ್ಯು

Share the Article

ತಾಳೆ ಮರದಿಂದ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಕೆದ್ದೇಲು ಎಂಬಲ್ಲಿ ನಡೆದಿದೆ.

ಕೆದ್ದೇಲು ನಿವಾಸಿ ಪ್ರಕಾಶ್ ಮೃತಪಟ್ಟ ದುರ್ದೈವಿ. ಕಳೆದ 20 ವರ್ಷಗಳಿಂದ ತಾಳೆ ಮರದಿಂದ ಶೇಂದಿ ತೆಗೆಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು.

ಗುರುವಾರ ಬೆಳಿಗ್ಗೆ ಕೆಲವು ತಾಳೆ ಮರಗಳ ಮೂರ್ತೆದಾರ ಕೆಲಸ ಮುಗಿಸಿ ಬಾಕಿ ಉಳಿದ ಅತೀ ಎತ್ತರದ ಹಳೆಯ ತಾಳೆ ಮರದ ಶೇಂದಿ ತೆಗೆಯಲು ಮರ ಏರಿದ್ದರು.

ತಾಳೆ ಮರದ ಬುಡದಲ್ಲಿ ಬಿದ್ದಿದ್ದ ಪ್ರಕಾಶ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಗಂಭೀರವಾಗಿ ತಲೆಗೆ ಗಾಯಗೊಂಡಿದ್ದರಿಂದ ಅದಾಗಲೇ ಪ್ರಕಾಶ್ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ

Leave A Reply