ಐಷರಾಮಿ ಕಾರಿನಲ್ಲಿ ಬಂದು ಹೂವಿನ ಕುಂಡಗಳನ್ನು ಕದಿಯುವ ಐನಾತಿ ಸುಂದರಿ | ಸಿಸಿಟಿವಿಯಲ್ಲಿ ಕೃತ್ಯ ದಾಖಲು

Share the Article

ಎಂಥೆಂಥ ಐನಾತಿ ಕಳ್ಳರನ್ನು ನೀವು ನೋಡಿರಬಹುದು. ಆದರೆ ಹೂವಿನ ಕುಂಡ ಕದಿಯುವ ಸುಂದರಿ ಕಳ್ಳಿಯನ್ನು ನೀವು ಕಂಡಿದ್ದೀರಾ ? ಅದು ಕೂಡಾ ಐಷರಾಮಿ ಕಾರಿನಲ್ಲಿ ಡ್ರೈವರ್ ಜೊತೆ ಬಂದು.

ಪ್ಯಾಂಟ್, ಷರ್ಟ್ ಧರಿಸಿ ಕಾರಿನಲ್ಲಿ ಬರುವ ಯುವತಿಯೊಬ್ಬಳು ಯಾರದೋ ಮನೆ ಮುಂದೆ ಇರುವ ಹೂವಿನ ಕುಂಡಗಳನ್ನು ಕದ್ದು ಕಾರಿನಲ್ಲಿ ಪರಾರಿಯಾಗುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಈ ರೀತಿಯ ಘಟನೆ ಸಂಜಯ ನಗರ ಠಾಣೆಯ ಆರ್ ಎಂವಿ ಎರಡನೇ ಸ್ಟೇಜ್ ನಲ್ಲಿ ನಡೆದಿದೆ. ಕಾವ್ಯ ಸೆಲ್ವಂ ಎನ್ನುವವರ ಮನೆಯಲ್ಲಿ ಮೊನ್ನೆ ಕೂಡಾ ಹೀಗೆಯೇ ಕಳ್ಳತನ ಆಗಿತ್ತು. ಈ ಕಳ್ಳನನ್ನು ಹಿಡಿಯಲೇ ಬೇಕೆಂದು ಸಿಸಿಟಿವಿ ಚೆಕ್ ಮಾಡಿದಾಗ ಸಿಸಿ ಟಿವಿಯಲ್ಲಿ ಐಷರಾಮಿ ಕಾರಿನಲ್ಲಿ ಬಂದ ಯುವತಿಯೊಬ್ಬಳು ಹೂವಿನ ಕುಂಡಗಳನ್ನು ಕದಿಯುತ್ತಿರುವ ದೃಶ್ಯ ಸೆರೆಯಾಗಿದೆ.

ಯುವತಿ ಕಳ್ಳತನ ಮಾಡುವ ಉದ್ದೇಶದಿಂದ ಕಾರನ್ನು ರಸ್ತೆಯ ಮಧ್ಯದಲ್ಲಿ ತಂದು ನಿಲ್ಲಿಸಿದ್ದಳು. ಕಳ್ಳರಂತೆ ಬಂದು ಎರಡು ಹೂ ಕುಂಡಗಳನ್ನು ಕಾರಿನ ಡಿಕ್ಕಿಯಲ್ಲಿ ಇಟ್ಟು ಪರಾರಿಯಾಗಿದ್ದಾಳೆ. ಇವಿಷ್ಟೂ ಸಿಸಿಟಿವಿ ಯಲ್ಲಿ ದಾಖಲಾಗಿದೆ.

Leave A Reply