ಸೌಂದರ್ಯ ಆರೋಗ್ಯ ವರ್ಧನೆಗಾಗಿ ‘ಮುಟ್ಟಿನ ರಕ್ತ’ ಸೇವನೆ | ಫೇಸ್ ಪ್ಯಾಕ್ ಗೆ ಕೂಡಾ ಈ ರಕ್ತ ಬಳಕೆ ಮಾಡುವ ಸ್ತ್ರೀ | ಪೇಟಿಂಗ್ ರಚಿಸಲು ಈ ರಕ್ತವೇ ಬಣ್ಣವಾಗಿ ಉಪಯೋಗ |ಮಹಿಳೆಯೊಬ್ಬಳ ಬೆಚ್ಚಿಬೀಳಿಸುವ ಹೇಳಿಕೆ

ಕೆಲವು ವರ್ಷಗಳ ಹಿಂದೆ ಸಾಂಪ್ರದಾಯಿಕ ಮನೆಗಳಲ್ಲಿ ‘ ಅಮ್ಮನ ಕಾಗೆ ಮುಟ್ಟಿದೆ, ಅವಳತ್ರ ಹೋಗಬೇಡ’ ಎಂಬ ಮಾತನ್ನು ಕೇಳಬಹುದಾಗಿತ್ತು. ಕೆಲವೊಂದು ಕಡೆಗಳಲ್ಲಿ ಮುಟ್ಟಿನ ಸಮಯದಲ್ಲಿ ಮಹಿಳೆಯರನ್ನು ಪ್ರತ್ಯೇಕ ಕೋಣೆಗಳಲ್ಲಿ ಇರುವಂತೆ ಮಾಡಲಾಗುತ್ತಿತ್ತು. ಆ ಕೋಣೆಗೆ ಸರಿಯಾದ ಗಾಳಿ ಬೆಳಕು ಇರುತ್ತಿರಲಿಲ್ಲ. ಹಳ್ಳಿಗಳಲ್ಲಿ ಮನೆಯಾಚೆಗಿನ ಕೊಟ್ಟಿಗೆಯಲ್ಲಿ ಇರಬೇಕಾಗಿರುತ್ತಿತ್ತು. ಮುಟ್ಟಿನ ಬಳಲಿಕೆಯಿಂದ ಸುಸ್ತಾದ ಸ್ತ್ರೀ ಆ ಕೋಣೆಗಳ ಅನಾರೋಗ್ಯಕರ ವ್ಯವಸ್ಥೆಯಿಂದಲೇ ಬೇರೆ ಅನಾರೋಗ್ಯಗಳಿಗೆ ತುತ್ತಾದರೂ ಆಶ್ಚರ್ಯರುತ್ತಿರಲಿಲ್ಲ.

ಆದರೆ ಕಾಲ ಬದಲಾದಂತೆ ಈಗ ಎಲ್ಲವೂ ಬದಲಾಗಿದೆ. ಹೆಣ್ಣುಮಕ್ಕಳು ನಿರ್ಭಯವಾಗಿ ಈ ಬಗ್ಗೆ ಮಾತನಾಡುತ್ತಾರೆ. ತಮ್ಮ ಆಪ್ತರಿರಬಹುದು, ಸ್ನೇಹಿತರಿರಬಹುದು. ಹಾಗೆನೇ ಋತುಸ್ರಾವ ಆದಾಗ ಬಹುತೇಕ ಹೆಣ್ಣುಮಕ್ಕಳಿಗೆ ಇದು ಯಾತನಮಯ ವೇದನೆ ಆಗಿರುತ್ತದೆ. ಇದಕ್ಕೆ ಕಾರಣ ಅದು ನೀಡುವ ನೋವು ಹಾಗೂ ಕೆಲವು ಮಾನಸಿಕ ಕಿರಿಕಿರಿ. ಅಷ್ಟು ಮಾತ್ರವಲ್ಲದೇ ಮುಟ್ಟಿನ ರಕ್ತದ ವಾಸನೆಯೂ ಕೂಡಾ ಅಸಹ್ಯಕರವಾಗಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಇಲ್ಲೊಬ್ಬಳು ಮಹಿಳೆ ಮುಟ್ಟಿನ ರಕ್ತವನ್ನು ತನ್ನ ಸೌಂದರ್ಯ ವೃದ್ಧಿಸುವುದಕ್ಕಾಗಿ ಕುಡಿಯುತ್ತಾಳಂತೆ. ಹೌದು ಇದು ನಿಜ.


Ad Widget

Ad Widget

Ad Widget

ಇಂಥದೊಂದು ವಿಲಕ್ಷಣ ಹೇಳಿಕೆ ಪ್ರಪಂಚದಾದ್ಯಂತ ಜನರನ್ನು ಬೆಚ್ಚಿಬೀಳಿಸುವುದರ ಜೊತೆ ಅಸಹ್ಯ ಹುಟ್ಟಿಸುವುದರಲ್ಲಿ ತಪ್ಪೇನಿಲ್ಲ ಬಿಡಿ. ಸ್ಪ್ಯಾನಿಷ್ ‌ ನ 30 ವರ್ಷದ ಮಹಿಳೆ ಈ ರೀತಿಯ ಒಂದು ಹೇಳಿಕೆ ನೀಡಿದ್ದಾಳೆ.

ಜಾಸ್ಮಿನ್ ಅಲಿಸಿಯಾ ಕಾರ್ಟರ್ ಮುಟ್ಟಿನ ಸಂದರ್ಭದಲ್ಲಿ ಹೊರ ಬರುವ ರಕ್ತವನ್ನು ಕುಡಿಯುತ್ತಾರಂತೆ. ಇದು ಅವರ ಆರೋಗ್ಯವನ್ನು ಸುಧಾರಿಸಿದೆ ಎಂದು ಹೇಳಿಕೆಯನ್ನು ನೀಡಿದ್ದಾರೆ. ಋತುಚಕ್ರದ ರಕ್ತವನ್ನು ಮುಖದ ಮೇಲೆ ಹಚ್ಚುವುದಲ್ಲದೇ, ಪೀರಿಯಡ್ ಪೇಟಿಂಗ್ಸ್ ರಚಿಸಲು ಅದನ್ನು ಬಳಸುವುದಾಗಿ ಕೂಡಾ ಹೇಳಿಕೊಂಡಿದ್ದಾಳೆ.

ಈಕೆ ಒಂದು ಮಗುವಿನ ತಾಯಿಯಾಗಿದ್ದು, ಮಹಿಳೆಯರಿಗೆ ಅವರ ಸಂಪೂರ್ಣ ಋತುಚಕ್ರದೊಳಗೆ ಇರುವ ಅಂತರ್ಗತ ಪವಿತ್ರತೆಯನ್ನು ಅರ್ಥಮಾಡಿಕೊಳ್ಳಲು ತರಬೇತಿ ನೀಡುವ ಮಾರ್ಗದರ್ಶಕರಾಗಿ ಕೆಲಸ ಕೂಡಾ ಮಾಡುತ್ತಾರೆ. ಮಹಿಳೆಯರು ರಕ್ತ ಹಾಗೂ ಯೋನಿಯಿಂದ ಇಲ್ಲಿರುವುದು. ಆದರೆ ಮಹಿಳೆಯರು ಸಾಕಷ್ಟು ಮನ್ನಣೆಯನ್ನು ಅದಕ್ಕೆ ಕೊಡುವುದಿಲ್ಲ ಎಂದು ಕಾರ್ಟರ್ ಅಭಿಪ್ರಾಯ.

ಮುಟ್ಟಿನ ರಕ್ತದಲ್ಲಿ ಪೋಷಕಾಂಶ, ಕಬ್ಬಿಣಾಂಶ ಮತ್ತು ಸೆಲ್ ಗಳಂತಹ ಪೋಷಕಾಂಶಗಳನ್ನು ಒಳಗೊಂಡಿದೆ. ಇವುಗಳನ್ನು ಸಂಗ್ರಹಿಸಿ ಸರಿಯಾದ ರೀತಿಯಲ್ಲಿ ಬಳಸಲು ಹಲವಾರು ಮಾರ್ಗಗಳಿವೆ ಎಂದು ಆಸ್ಮಿನ್ ಹೇಳುತ್ತಾರೆ.

ಈಕೆ ಋತುಚಕ್ರದ ರಕ್ತ ಹಿಡಿದಿಡಲು ಬಳಸುವ ಕಪ್ ನಿಂದ ಫ್ರೆಶ್ ಅವಧಿಯ ರಕ್ತವನ್ನು ಸಂಗ್ರಹಿಸಿ ಒಂದು ಸಿಪ್ ಸೇವಿಸುತ್ತಾಳೆ. ನಂತರ ಬ್ರಷ್ ಅಥವಾ ಬೆರಳುಗಳಿಂದ ರಕ್ತವನ್ನು ‘ ಫೇಸ್ ಮಾಸ್ಕ್’ ಆಗಿ ಮುಖಕ್ಕೆ ಹಚ್ಚುತ್ತಾಳೆ.

ಮುಟ್ಟಿನ ಫೇಸ್ ಮಾಸ್ಕ್, ಚರ್ಮಕ್ಕೆ ಉತ್ತಮವಾಗಿದೆಯಂತೆ. ಇದರ ಭಾವನೆ ಉತ್ತಮವಾಗಿದೆ ಹಾಗೂ ಉಲ್ಲಾಸಕರವಾಗಿದೆ ಎಂದು ಕಾರ್ಟರ್ ಹೇಳಿಕೆ.

Leave a Reply

error: Content is protected !!
Scroll to Top
%d bloggers like this: