ಮದುವೆಯಾಗುವ ಭರವಸೆ ನೀಡಿ ಉಲ್ಲಂಘನೆ ಮಾಡಿದರೆ ಅದು ವಂಚನೆಯಲ್ಲ- ಹೈಕೋರ್ಟ್

Share the Article

ಬೆಂಗಳೂರು: ಮದುವೆಯಾಗುವ ಭರವಸೆ ನೀಡಿ ಅದನ್ನು ಉಲ್ಲಂಘನೆ ಮಾಡಿದರೆ ವಂಚನೆಯಲ್ಲ ಎಂದು ಕೇಸ್ ರದ್ದುಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ.

ವೆಂಕಟೇಶ್ ಎಂಬಾತನ ವಿರುದ್ಧ ಯುವತಿ ನೀಡಿದ ದೂರು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಯುವತಿಯನ್ನು ಪ್ರೀತಿಸಿ ನಂತರ ವೆಂಕಟೇಶ್ ಎಂಬಾತ ವಿವಾಹವಾಗಿರಲಿಲ್ಲ. ಮನೆಯವರ ಒತ್ತಾಯದಂತೆ ಬೇರೆ ಯುವತಿಯೊಂದಿಗೆ ವಿವಾಹವಾಗಿದ್ದ .

ಹೀಗಾಗಿ ವೆಂಕಟೇಶ್ ಮತ್ತು ಆತನ ಕುಟುಂಬದವರ ವಿರುದ್ಧ ಯುವತಿ ದೂರು ನೀಡಿದ್ದಳು.

ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎಂದು ಯುವತಿ ಆರೋಪ ಮಾಡಿದ್ದಳು. ಸದ್ಯ ಮದುವೆಯ ಭರವಸೆ ಉಲ್ಲಂಘನೆ ವಂಚನೆಯಾಗುವುದಿಲ್ಲ ಎಂದು ಪ್ರಕರಣ ರದ್ದುಗೊಳಿಸಿ ನ್ಯಾಯಾಧೀಶರಾದ ಕೆ. ನಟರಾಜನ್ ರವರಿದ್ದ ಏಕಸದಸ್ಯ ಪೀಠ ಆದೇಶ ನೀಡಿದೆ.

Leave A Reply