ಉದ್ಯೋಗಾಂಕ್ಷಿಗಳೇ ಗಮನಿಸಿ : KPTCL ನಲ್ಲಿ ಭರ್ಜರಿ ಉದ್ಯೋಗವಕಾಶ, 1492 ವಿವಿಧ ಹುದ್ದೆಗಳು, ಹೆಚ್ಚಿನ ವಿವರ ಇಲ್ಲಿದೆ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಈ ಕೆಳಕಂಡ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ‘ ಆನ್ ಲೈನ್ ‘ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಫೆಬ್ರವರಿ 07 ರ ನಂತರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ‌.

ಹುದ್ದೆ : ಸಹಾಯಕ ಇಂಜಿನಿಯರ್ ( ವಿದ್ಯುತ್ ) – 505 ಹುದ್ದೆಗಳು

ಸಹಾಯಕ ಇಂಜಿನಿಯರ್ ( ಸಿವಿಲ್) – 28 ಹುದ್ದೆಗಳು

ಕಿರಿಯ ಇಂಜಿನಿಯರ್ ( ವಿದ್ಯುತ್ ) – 570 ಹುದ್ದೆಗಳು

ಕಿರಿಯ ಇಂಜಿನಿಯರ್ ( ಸಿವಿಲ್ ) – 29 ಹುದ್ದೆಗಳು

ಕಿರಿಯ ಸಹಾಯಕ – 360 ಹುದ್ದೆಗಳು

ಒಟ್ಟು 1492 ಹುದ್ದೆಗಳು.

ವೇತನ : ಎಇ( ವಿದ್ಯುತ್ )- ₹ 41130-₹ 72920

ಎಇ ( ಸಿವಿಲ್) – ₹ 41130-₹ 72920

ಜೆಇ ( ವಿದ್ಯುತ್ ) – ₹ 26270-₹ 65020

ಜೆಇ ( ಸಿವಿಲ್ ) – ₹ 26270- ₹ 65020

ಜೂನಿಯರ್ ಅಸಿಸ್ಟೆಂಟ್ – ₹20220- ₹ 51640

ಹುದ್ದೆಗಳ ವರ್ಗೀಕರಣ , ಮೀಸಲಾತಿ, ವಿವರ, ಕಲ್ಯಾಣ ಕರ್ನಾಟಕ ಪ್ರದೇಶ ಮೀಸಲಾತಿ, ವಯೋಮಿತಿ, ಅರ್ಹತೆ, ನೇಮಕಾತಿ ವಿಧಾನ, ಪರೀಕ್ಷಾ ವಿಧಾನ, ಅರ್ಜಿಯ ನಮೂನೆ ಮತ್ತು ಇತರೆ ವಿವರಗಳನ್ನು ದಿನಾಂಕ 07-02-2022 ರ ನಂತರ ಕವಿಪ್ರನಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯಪಡಿಸಲಾಗುವುದು.

Leave A Reply

Your email address will not be published.