ಪತ್ನಿ ಮತಾಂತರಕ್ಕೆ ಪತಿಯಿಂದಲೇ ಒತ್ತಾಯ|ಆಕೆ ನಿರಾಕರಿಸಿದ್ದಕ್ಕೆ ಕಿರುಕುಳ ನೀಡಿದ ಪತಿ |ನೊಂದ ಮಹಿಳೆಯಿಂದ ಪೊಲೀಸರಿಗೆ ದೂರು

ಶಿವಮೊಗ್ಗ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಪತ್ನಿಗೆ ಒತ್ತಾಯಿಸಿದ್ದು, ಆಕೆ ನಿರಾಕರಿಸಿದ್ದರಿಂದ ಪತಿಯೇ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಹಿತ್ಲ ಸಮೀಪದ ಮಾಡ್ರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಗಂಡನ ವಿರುದ್ಧ ನೊಂದ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.


Ad Widget

Ad Widget

Ad Widget

ಪತಿ ಗ್ರಾಮದ ದೇವಾಲಯದಲ್ಲಿ ಪೂಜೆ ಮಾಡಿಕೊಂಡಿದ್ದ, ಬಳಿಕ ಆಮಿಷಕ್ಕೆ ಒಳಗಾಗಿ ಮೂರು ತಿಂಗಳ ಹಿಂದೆ ಮತಾಂತರವಾಗಿದ್ದಾರೆ.ಇದೀಗ ಮನೆಯವರಿಗೂ ಮತಾಂತರವಾಗುವಂತೆಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.

‘ಕಳೆದ ಮೂರು ತಿಂಗಳಿನಿಂದ ಪತಿ ಮತಾಂತರಕ್ಕೆ ಕಿರುಕುಳ ನೀಡುತ್ತಿದ್ದಾನೆ. ಮತಾಂತರವಾಗದಿದ್ದರೆ ತವರಿಗೆ ಹೋಗುವಂತೆ ಬಲವಂತ ಮಾಡುತ್ತಿದ್ದಾನೆ. ಮಕ್ಕಳು ಓದಿಕೊಳ್ಳುವ ಸಮಯದಲ್ಲಿ,ಬೈಬಲ್ ಓದುವ ಪತಿ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ಜೋರಾಗಿ ಓದದಂತೆ ತಾಕೀತು ಮಾಡುತ್ತಿದ್ದಾನೆ. ಮನೆಯ ಹಿರಿಯರು ಪಂಚಾಯ್ತಿ ಮಾಡಿದಾಗ,ಪತಿ ಚಿಕ್ಕಪ್ಪನ ಮನೆಯಲ್ಲಿ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಮೂವರು ಮಕ್ಕಳನ್ನು ಸಾಕಲಾಗದೆ ತೊಂದರೆಯಾಗುತ್ತಿದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ‘ನೊಂದ ಮಹಿಳೆ ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: