ಲಾರಿ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ!! ಲಾರಿಯಡಿಗೆ ಬಿದ್ದು ಸ್ಥಳದಲ್ಲೇ ಅಸುನೀಗಿದ ಹಿರಿಯ ಪತ್ರಕರ್ತ ಗಂಗಾಧರ ಮೂರ್ತಿ!!

ಬೆಂಗಳೂರು: ನಗರದ ಟೌನ್ ಹಾಲ್ ಬಳಿ ಬೈಕ್ ಹಾಗೂ ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹಿರಿಯ ಪತ್ರಕರ್ತ, ವಿಜಯವಾಣಿ ಪತ್ರಿಕೆಯ ಮುಖ್ಯ ಉಪಸಂಪಾದಕ ಗಂಗಾಧರ ಮೂರ್ತಿ(49) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ.

ಘಟನೆ ವಿವರ: ಮೃತ ಗಂಗಾಧರ ಮೂರ್ತಿ ಅವರು ತಮ್ಮ ಕಚೇರಿಗೆಂದು ಬೈಕ್ ನಲ್ಲಿ ತೆರಳುತ್ತಿರುದ್ಧ ಸಂದರ್ಭದಲ್ಲಿ ಟೌನ್ ಹಾಲ್ ಎದುರು ನಿಯಂತ್ರಣ ತಪ್ಪಿದ ಲಾರಯೊಂದು ಡಿವೈಡರ್ ಗೆ ಗುದ್ದಿ ರಸ್ತೆಯ ಮೇಲೆ ಮಗುಚಿ ಬಿದ್ದಿದ್ದು, ಈ ವೇಳೆ ಬೈಕ್ ಲಾರಿ ಯಡಿಗೆ ಬಿದ್ದು ಸವಾರ ಸ್ಥಳದಲ್ಲೇ ಅಸುನೀಗಿದ್ದಾರೆ.


Ad Widget

Ad Widget

Ad Widget

ಮೃತ ಗಂಗಾಧರ ಮೂರ್ತಿ ಓರ್ವ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ಹಲವು ವರ್ಷಗಳಿಂದ ಹಿರಿಯ ಪತ್ರಕರ್ತರಾಗಿ, ವಿಜಯವಾಣಿ ದಿನಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಅಪಘಾತ ನಡೆಸಿದ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಹಲಸೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಾರಿ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: