ಅಂತ್ಯ ಕಾಣದ ಉಡುಪಿ ಪಿಯು ಕಾಲೇಜ್ ‘ಹಿಜಾಬ್ ‘ಧರಿಸುವ ಪ್ರಕರಣ|ಮುಂದುವರಿದು ಬಿಜೆಪಿ-ಕಾಂಗ್ರೆಸ್ ನಡುವೆ ವಾಗ್ವಾದ |ಹಿಜಾಬ್‌ಗೆ ಅವಕಾಶ ನೀಡಿದರೆ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಹಿಂದೂ ಹುಡುಗರು ಕೇಸರಿ ಶಾಲು ಧರಿಸಿ ತರಗತಿಗಳಿಗೆ ಹಾಜರು -ಹಿಂದೂ ಜಾಗರಣ ವೇದಿಕೆ|

ಉಡುಪಿ: ಮಹಿಳಾ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಳೆದ ಮೂರು ವಾರಗಳ ಹಿಂದೆ ನಡೆದ ಹಿಜಾಬ್ ಧರಿಸಿದ ಪ್ರಕರಣ ದಿನದಿಂದ ದಿನಕ್ಕೆ ಮುಂದುವರಿಯುತ್ತಲೇ ಇದ್ದು,ಧರ್ಮಗಳ ಪ್ರತಿಭಟನೆಗೆ ಅಂತ್ಯವಾಗದೆ,ಇದರ ಜೊತೆಗೆ ರಾಜಕೀಯ ಪಕ್ಷಗಳೂ ಸೇರಿಕೊಳ್ಳುತ್ತಿವೆ.

ಮಸ್ಲಿಂ ಯುವತಿಯರು ಹಿಜಾಬ್ ಧರಿಸಿದರೇ ತರಗತಿ ಪ್ರವೇಶಿಸಲು ಬಿಡುವುದಿಲ್ಲ,ಇದು ಕಾಲೇಜಿನ ಸಮವಸ್ತ್ರ ನಿಯಮಕ್ಕೆ ವಿರುದ್ಧವಾಗಿದೆ ಎಂದು ಸ್ಥಳೀಯ ಬಿಜೆಪಿ ಮುಖಂಡರ ನೇತೃತ್ವದ ಕಾಲೇಜು ಅಭಿವೃದ್ಧಿ ಮಂಡಳಿ ಪಟ್ಟು ಹಿಡಿದಿದೆ.

ಕ್ಯಾಂಪಸ್ ನಲ್ಲಿ ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ, ಇದನ್ನು ವಿರೋಧಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಸ್ಥೆಗೆ ಹೊಂದಿಕೊಂಡಿರುವ ಕ್ಯಾಂಪಸ್ ಫ್ರಂಟ್ ಇಂಡಿಯಾ ಪ್ರತಿಭಟನೆ ನಡೆಸಿತು, ಇದಕ್ಕೆ ಬೆಂಬಲ ನೀಡಲು ಶುಕ್ರವಾರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ವಿದ್ಯಾರ್ಥಿ ಸಂಘಟನೆ ಎನ್ ಎಸ್ ಯುಐ ಕೂಡ ಪ್ರತಿಭಟನೆ ನಡೆಸಿತು.

ಎನ್ ಎಸ್ ಯು ಐ ರಾಜ್ಯ ಸಮಿತಿಯ ನಿಯೋಗವು ಪ್ರಾಂಶುಪಾಲರನ್ನು ಭೇಟಿ ಮಾಡಿ, ವಿದ್ಯಾರ್ಥಿಗಳ ‘ಸಾಂವಿಧಾನಿಕ’ ಹಕ್ಕುಗಳನ್ನು ಎತ್ತಿ ಹಿಡಿಯುವಂತೆ ಕೇಳಲು ಕಾಲೇಜಿಗೆ ಆಗಮಿಸಿತು. ಕೆಲವು ವಿದ್ಯಾರ್ಥಿಗಳು ಕೋವಿಡ್-ಪಾಸಿಟಿವ್ ಬಂದ ಬಗ್ಗೆ ವರದಿಯಾಗಿತ್ತು ಈ ಹಿನ್ನೆಲೆಯಲ್ಲಿ ಶುಕ್ರವಾರ ಕಾಲೇಜು ಮುಚ್ಚಲಾಯಿತು.ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವ ಮೂಲಭೂತ ಹಕ್ಕನ್ನು ನಿರಾಕರಿಸಿದರೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗುವುದು ಎಂದು ಕರ್ನಾಟಕ ಎನ್‌ಎಸ್‌ಯುಐ ಉಪಾಧ್ಯಕ್ಷ ಫರಾಕ್ ಬಯಾಬೆ ಸುದ್ದಿಗಾರರಿಗೆ ತಿಳಿಸಿದರು.ನಂತರ ನಿಯೋಗವು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರಿಗೆ ಮನವಿ ಸಲ್ಲಿಸಿ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಕೋರಿತು.

ಎನ್‌ಎಸ್‌ಯುಐ ನಿಯೋಗ ಕಾಲೇಜಿಗೆ ಆಗಮಿಸುತ್ತಿದೆ ಎಂಬ ಸುಳಿವು ಬಲಪಂಥೀಯ ಸಂಘಟನೆಗಳಿಗೆ ಸಿಕ್ಕ ತಕ್ಷಣ ಹಿಂದೂ ಜಾಗರಣ ವೇದಿಕೆಯ ಮುಖಂಡರು ಅಲ್ಲಿಗೆ ಆಗಮಿಸಿದರು.ಹಿಂದೂ ಜಾಗರಣ ವೇದಿಕೆಯ ಮಂಗಳೂರು ವಿಭಾಗೀಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ ಮಾತನಾಡಿ, ಹಿಜಾಬ್‌ಗೆ ಅವಕಾಶ ನೀಡಿದರೆ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಹಿಂದೂ ಹುಡುಗರು ಕೇಸರಿ ಶಾಲು ಧರಿಸಿ ತರಗತಿಗಳಿಗೆ ಹಾಜರಾಗಲಿದ್ದಾರೆ ಎಂದು ಹೇಳಿದರು.

ಸ್ಕಾರ್ಪ್ ಧರಿಸಲು ಅವಕಾಶ ನೀಡಿದರೆ, ಭವಿಷ್ಯದಲ್ಲಿ, ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಸಂಕೇತವೆಂದು ಹೇಳಿಕೊಂಡು ಬುರ್ಖಾಗಳನ್ನು ಹಾಕಿಕೊಳ್ಳಲು ಸಹ ಅನುಮತಿಸಬೇಕೆಂದು ಒತ್ತಾಯಿಸಬಹುದು ಎಂದು ಅವರು ಆತಂಕ ವ್ಯಕ್ತ ಪಡಿಸಿದರು. ಸಮಾನತೆಯನ್ನು ಎತ್ತಿಹಿಡಿಯುವ ಸಂವಿಧಾನದ ನಿಜವಾದ ಸ್ಪೂರ್ತಿಯು ನಂತರ ಹೋಗುತ್ತದೆ” ಎಂದು ಅವರು ಹೇಳಿದರು.

Leave A Reply

Your email address will not be published.