ಇನ್ನು ಮುಂದೆ ವಿಮಾನದಲ್ಲಿ ಪ್ರಯಾಣಿಸುವಾಗ ಒಂದಕ್ಕಿಂತ ಹೆಚ್ಚಿನ ಬ್ಯಾಗ್ ಕೊಂಡೊಯ್ಯಲು ಅವಕಾಶವಿಲ್ಲ, ಭದ್ರತಾ ಸಂಸ್ಥೆಯಿಂದ ನಿಯಮ ಜಾರಿ !

ಬ್ಯೂರೋ ಆಫ್ ಸಿವಿಲ್ ಏವಿಯೇಷನ್‌ ಸೆಕ್ಯುರಿಟಿ ವಿಮಾನ ನಿಲ್ದಾಣದಲ್ಲಿ ದಟ್ಟಣೆ ಮತ್ತು ಭದ್ರತಾ ಬೆದರಿಕೆಯನ್ನು ತಗ್ಗಿಸಲು ಪ್ರಯಾಣಿಕರ ಹ್ಯಾಂಡ್ ಬ್ಯಾಗ್ ಗಳ ಸಂಖ್ಯೆಯನ್ನು ಒಂದಕ್ಕೆ ಇಳಿಸಿದೆ.

ಭಾರತದಲ್ಲಿನ ಎಲ್ಲಾ ದೇಶೀಯ ವಿಮಾನಗಳಿಗೆ ಈ ನಿಯಮ ಅನ್ವಯಿಸುತ್ತದೆ. ಮಹಿಳೆಯರ ಹ್ಯಾಂಡ್ ಬ್ಯಾಗ್ ಸೇರಿದಂತೆ ಸುತ್ತೋಲೆಯಲ್ಲಿ ಪಟ್ಟಿಮಾಡಿರುವ ಐಟಂಗಳನ್ನು ಹೊರತುಪಡಿಸಿ ಒಂದಕ್ಕಿಂತ ಹೆಚ್ಚಿನ ಹ್ಯಾಂಡ್ ಬ್ಯಾಗ್ ನ್ನು ಸಾಗಿಸಲು ಅನುಮತಿಸಬಾರದು ಎಂದಾಗಿದೆ.

ಇನ್ನು ಮುಂದೆ ದೇಶೀಯ ವಿಮಾನಗಳಲ್ಲಿ ಪ್ರಯಾಣಿಸುವವರು 1 ಹ್ಯಾಂಡ್ ಬ್ಯಾಗ್ ಮಾತ್ರ ತೆಗೆದುಕೊಂಡು ಹೋಗಬಹುದು. ನಾಗರಿಕ ವಿಮಾನಯಾನ ಸುರಕ್ಷತ ಬ್ಯೂರೋ ಹೊಸ ನಿಯಮ ಜಾರಿಗೊಳಿಸಿದೆ.

ಒಂದಕ್ಕಿಂತ ಹೆಚ್ಚು ಬ್ಯಾಗ್ ಗಳನ್ನು ಪ್ರಯಾಣಿಕರು ತರದಂತೆ ಏರ್ ಲೈನ್ ಗಳು ನೋಡಿಕೊಳ್ಳಬೇಕು. ಟಿಕೆಟ್ ಗಳಲ್ಲಿ ಈ ಬಗ್ಗೆ ಮಾಹಿತಿ ಕೊಡಬೇಕು. ಏರ್ ಪೋರ್ಟ್ ನಲ್ಲೂ ಈ ಬಗ್ಗೆ ತಿಳಿಸಬೇಕು.

ಬ್ಯಾಗ್ ಪರಿಶೀಲನೆ ಹಾಗೂ ಸುರಕ್ಷತಾ ದೃಷ್ಟಿಯಿಂದ ಹೆಚ್ಚು ಸಮಯ ವ್ಯರ್ಥವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಆದರೆ ಮಹಿಳೆಯರ ಹ್ಯಾಂಡ್ ಬ್ಯಾಗ್, ಲ್ಯಾಪ್ ಟಾಪ್ ಬ್ಯಾಗ್ ಸೇರಿ ಹಲವು ರೀತಿಯ ಬ್ಯಾಗ್ ಗಳಿಗೆ ಅನುಮತಿ ಇದೆ.

Leave A Reply

Your email address will not be published.