ಈತ ಜಗತ್ತಿನ ಅತೀ ಕೊಳಕ | 67 ವರ್ಷದಿಂದ ಸ್ನಾನವಿಲ್ಲ,ಕೊಳಚೆ ನೀರೇ ಈತನ ಜೀವಜಲ

ಆರೋಗ್ಯವೇ ಭಾಗ್ಯ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕೆಲವೊಮ್ಮೆ ನಾವು ಎಷ್ಟೇ ಶುಚಿತ್ವವನ್ನು ಕಾಪಾಡಿದರೂ ರೋಗಗಳು ನಮಗೆ ಬರುತ್ತದೆ. ಅತಿಯಾದ ಕಾಳಜಿ ಮಾಡಿದರೂ ಅನಾರೋಗ್ಯ ತಪ್ಪಲ್ಲ.


Ad Widget

Ad Widget

Ad Widget

ಆದರೆ ಇಲ್ಲೊಬ್ಬ ವ್ಯಕ್ತಿಯಿದ್ದಾನೆ. ಈತನನ್ನು ಜಗತ್ತಿನ ಅತೀ ಅತ್ಯಂತ ಕೊಳಕು ವ್ಯಕ್ತಿ ಅಂದರೆ ಅತಿಶಯೋಕ್ತಿಯಾಗದು.
ಈತನ ವಯಸ್ಸು 83 ವರ್ಷ. ಹೆಸರು ಅಮೌ ಹಾಕಿ.  ಈತ ಕಳೆದ 67 ವರ್ಷಗಳಿಂದ ಸ್ನಾನ ಮಾಡಿಲ್ಲ ! ಅಷ್ಟೇ ಅಲ್ಲ, ಆತ ಬಾಯಾರಿಕೆ ಆದಂತೆಲ್ಲ ಕೊಚ್ಚೆ ನೀರು ಕುಡಿಯುತ್ತಾ ದಿನ ಕಳೆಯುತ್ತಾನೆ. ಕಚ್ಚಾ ಆಹಾರ ಸೇವಿಸುತ್ತಾರೆ. ಮುಳ್ಳು ಹಂದಿಗಳು, ಮೊಲಗಳೇ ಈತನ ಡಯಟ್. ಇಲ್ಲಿಯತನಕ ಯಾವ ಖಾಯಿಲೆಯೂ ಈತನ ಹತ್ತಿರ ಸುಳಿದಿಲ್ಲ. ಕೊಳಕುತನವೆ ಆತನ ಆರೋಗ್ಯದ ಒಳ ಗುಟ್ಟು.
ಈತ ಆರು ದಶಕಗಳ ಹಿಂದೆಯೇ ಮನೆ ಬಿಟ್ಟಿದ್ದ. ನಂತರ ಸ್ನಾನ ಅಂದರೆ ಸ್ನಾನ ಅಂದರೆ ಏನು ಎನ್ನುವುದು ಈತನಿಗೆ ಮರೆತು ಹೋಗಿದೆ.
ಸ್ನಾನ ಮಾಡಿದರೆ ಈತನ ಆರೋಗ್ಯ ಹದಗೆಡುತ್ತದೆ ಎಂಬುದು ಈತನ ನಂಬಿಕೆ. ಅದಕ್ಕಾಗೇ ಸ್ನಾನನೇ ಮಾಡದೇ ಇದ್ದಾನೆ. ಆದರೂ ಆತನ ಆರೋಗ್ಯ ಈ 67 ವರ್ಷದಲ್ಲಿ ಒಂದು ಚೂರೂ ಅಲ್ಲಾಡಿಲ್ಲ.

ಈತ ಸ್ನಾನ ಮಾಡದೇ ಇದ್ದರೂ ಈತನ ಮೈಯಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ಆಗಿಲ್ಲ. ಈತನಿಗೆ ಸಂಬಂಧಿಕರು ಯಾರೂ ಇಲ್ಲ. ನೆಂಟರು ಇಷ್ಟರು, ಇಷ್ಟವಿಲ್ಲದವರು… ಊಹೂಂ ಯಾರೂ ಈತನಿಗೆ ಇಲ್ಲ. ಮನೆ ಕೂಡಾ ಇಲ್ಲ. ಒಬ್ಬಂಟಿಯಾಗಿಯೇ ಪ್ರಾಣಿಗಳ ಥರ ಜೀವನ ಸಾಗಿಸುತ್ತಾನೆ. ಅದೇ ಕಾರಣಕ್ಕೆ ಟೆನ್ಶನ್ ಇಲ್ಲ.

ಪ್ರಾಣಿಗಳ ಗೊಬ್ಬರವನ್ನು ಪೈಪ್ ನಲ್ಲಿ ತುಂಬಿಸಿ ಸಿಗರೇಟ್ ರೀತಿ ಸೇದುತ್ತಾನೆ‌. ರಸ್ತೆಯಲ್ಲಿ ಸಿಕ್ಕ ಸಿಕ್ಕ ಆಹಾರ ಸೇವಿಸುತ್ತಾನೆ‌ ಈತನ ವಾಸಸ್ಥಾನ ವಿಚಿತ್ರವಾಗಿದೆ. ಭೂಮಿಯ ರಂಧ್ರ ಕೊರೆದು ಅದರೊಳಗೆ ಈತ ವಾಸಿಸುತ್ತಿದ್ದ. ಈತನಿಗಾಗಿ ಈಗ ಗ್ರಾಮಸ್ಥರು ಒಂದು ಗುಡಿಸಲು ಕೂಡಾ ಕಟ್ಟಿಕೊಟ್ಟಿದ್ದಾರೆ. ಈಗ ಅದೇ ಅವನ ಆವಾಸಸ್ಥಾನ. ‘ಪ್ರಾಣಿಗಳಂತೆ ಬೀಡಾಡಿಯಾಗಿ ಬದುಕಿರಿ, ದೀರ್ಘ ಕಾಲ ಜೀವಿಸಿ’ ಅನ್ನೋದೇ ಈ ಮನುಶ್ಯ ಜೀವಿಯಿಂದ ನಮಗೆ ಸಿಗುವ ಪಾಠವೇ ?! ಗೊತ್ತಿಲ್ಲ.

Leave a Reply

error: Content is protected !!
Scroll to Top
%d bloggers like this: